ಕುಲಾಲ ಸಂಘ ಕಾಂತಾವರ ಇದರ ದ್ವಿತೀಯ ವರ್ಷದ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮತ್ತು ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ

0
32

ಕುಲಾಲ ಸಂಘ ಕಾಂತಾವರ ಇದರ ದ್ವಿತೀಯ ವರ್ಷದ ವಾರ್ಷಿಕ ಮಹಾಸಭೆ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮತ್ತು ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ಆಟಿಡೋಂಜಿ ಕುಲಾಲ ಕೂಟ*ಎಂಬ ಶೀರ್ಷಿಕೆಯಡಿಯಲ್ಲಿ ಇಂದು ಪರಪ್ಪಾಡಿ ಶಾಲೆಯ ಬಳಿಯ ಮನೆಯಲ್ಲಿ ಸಂಘದ ಅಧ್ಯಕ್ಷರಾದ ವಿಠ್ಠಲ ಮೂಲ್ಯ ಬೇಲಾಡಿ ಇವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರ್ಕಳ ತಾಲೂಕು ಕುಲಾಲ ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ ಕುಲಾಲ್ ಇವರು ನಮ್ಮ ಸಮಾಜದ ಸಂಘಟನೆಯ ಅಗತ್ಯತೆ ಮತ್ತು ಗ್ರಾಮ ಸಮಿತಿಗಳು ತಾಲ್ಲುಕು ಸಂಘದ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುವಂತೆ ಕರೆ ನೀಡಿದರು ಮುಖ್ಯ ಅತಿಥಿಗಳಾಗಿ ಸಾಣೂರು ಕುಲಾಲ ಸಂಘದ ಅಧ್ಯಕ್ಷರು ಯುವ ಉದ್ಯಮಿ ಶಂಕರ್ ಕುಲಾಲ್ ಸಾಣೂರು ,ಇರ್ವತ್ತೂರು ಸಂಘದ ಅಧ್ಯಕ್ಷರಾದ ಸುರೇಶ್ ಎಂ ಬಂಗೇರ ,ನಾನಿಲ್ತಾರ್ ಸಂಘದ ಉಪಾಧ್ಯಕ್ಷರಾದ ಬೊಗ್ಗು ಮೂಲ್ಯ ಬೇಲಾಡಿ, ಕಾಂತಾವರ ಕುಲಾಲ ಮಹಿಳಾ ಸಂಘದ ಸಂಘದ ಅಧ್ಯಕ್ಷರಾದ ಜ್ಯೋತಿ ಕುಲಾಲ್ ಬಾರಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ನಮ್ಮ ಗ್ರಾಮದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮತ್ತು SSLC ಮತ್ತು PUC ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು ಹಾಗೆಯೇ ಗ್ರಾಮದ ನಮ್ಮ ಸಮಾಜದ ಅಸಹಾಯಕರಿಗೆ ಸಹಾಯ ನೀಡಲು ಸರ್ವಜ್ಞ ಸೇವಾ ಸಿಂಧು ಕಾಂತಾವರ ಸಂಸ್ಥೆಯ ಲೋಗೋ ಅನಾವರಣ ಮಾಡಲಾಯಿತು ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ನಂತರ ಮಹಿಳಾ ಸಂಘದ ಸದಸ್ಯೆಯರು ಮನೆಯಲ್ಲಿ ತಯಾರಿಸಿದ ಆಟಿ ತಿಂಗಳ ವಿಶೇಷ ತಿಂಡಿ ತಿನಸುಗಳ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನ ಗೊಂಡಿತು.

ಶ್ರೀಮತಿ ವಿಜೇತಾ ಭರತೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು ಪ್ರಭಾಕರ್ ಕುಲಾಲ್ ಬೇಲಾಡಿ ಪ್ರಾಸ್ತಾವಿಕದೊಂದಿಗೆ ಸ್ವಾಗತ ಕೋರಿದರು ಕಾರ್ಯದರ್ಶಿ ಮಹೇಶ್ ಕುಲಾಲ್ ವರದಿ ವಾಚಿಸಿದರು ಕುಮಾರಿ ಕೃತಿ ಕುಲಾಲ್ ವಿದ್ಯಾರ್ಥಿಗಳ ಹೆಸರು ವಾಚಿಸಿದರು ಕುಮಾರಿ ಹರ್ಷ ಕುಲಾಲ್ ಧನ್ಯವಾದವಿತ್ತರು.