ಪ್ರಕೃತಿ ಮತ್ತು ಕೃಷಿ ಈ ಮಣ್ಣಿನ ಆರಾಧ್ಯ ಸಂಸ್ಕೃತಿ ” : ಮಾಜಿ ಸಚಿವರು ಶಾಸಕ ಸುನಿಲ್ ಕುಮಾರ್

0
40

26.07.2026 ಭಾನುವಾರ ” ಯೂತ್ ಫ್ರೆಂಡ್ಸ್ ” ಇರ್ವತ್ತೂರು ಇದರ ಆಶ್ರಯದಲ್ಲಿ ನಡೆದ “ಕೇಸರ್ಡ್ ಒಂಜಿ ದಿನ ” ಕಾರ್ಯಕ್ರಮ ದಲ್ಲಿ ಕಾರ್ಕಳ ಶಾಸಕ ಮಾಜಿ ಸಚಿವರು ಆಗಿರುವ ವಿ. ಸುನಿಲ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಪ್ರಕೃತಿ ಮತ್ತೆ ಕೃಷಿ ಈ ಮಣ್ಣಿನ ಆರಾಧ್ಯ ಸಂಸ್ಕೃತಿ ಇದನ್ನು ಯಾವತ್ತೂ ಪೂಜ್ಯ ಭಾವನೆಯಿಂದ ರಕ್ಷಣೆ ಮಾಡಿದ್ರೆ ಯಾವತ್ತೂ ಮನುಕುಲಕ್ಕೆ ಅಪಾಯ ಇಲ್ಲ ಎಂದು ಹೇಳಿದರು.

ಇಂತಹ ಕಾರ್ಯಕ್ರಮಗಳು ಕೇವಲ ಮನೋರಂಜನೆಗಳಿಗೆ ಸೀಮಿತವಾಗದೆ ಯುವ ಸಮುದಾಯಕ್ಕೆ ನಿರಂತರವಾಗಿ ಕೃಷಿ ಚಟುವಟಿಕೆಗಳ ಒಲವು ಬದುಕಿನ ದಾರಿ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿ ಭಾಸ್ಕ‌ರ್ ಕೋಟ್ಯಾನ್ ಇರ್ವತ್ತೂರು, ಜಯಕೀರ್ತಿ ಕಡಂಬ ಕೊಳಕೆ ಮನೆ, ನಿಕಟಪೂರ್ವ ಅಧ್ಯಕ್ಷರು ಭರತ್ ಜೈನ್, ರಮಿತಾ ಕುಲಾಲ್, ಅಣ್ಣಿ ಎಂ, ಗೋಪಾಲ ಪೂಜಾರಿ, ಚಂದ್ರಹಾಸ ಸಾಧು ಸನಿಲ್, ಹಂಸರಾಜ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು ಮಿಥುನ್ ಸ್ವಾಗತಿಸಿ, ಸತೀಶ್ ಹೊಸ್ಮರ್ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು.

ಮಾಹಿತಿ : ಸತೀಶ್ ಇರ್ವತ್ತೂರು