ಡಿ-ಗ್ರೂಪ್ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; ಮಹಿಳಾ ಆಯೋಗದ ಸದಸ್ಯೆಯಿಂದ ತರಾಟೆ

0
51

ಬೈಕಂಪಾಡಿ : ಡಿ ಗ್ರೂಪು ಕೆಲಸದಲ್ಲಿರುವ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ಆರೋಪಿಸಿ APMC ಜಂಟಿ ನಿರ್ದೇಶಕ ಸಿ.ಎಚ್ ಮೋಹನ್ ನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಮತ್ತು ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಗಳೂರು ಬೈಕಂಪಾಡಿಯಲ್ಲಿರುವ APMC ಕಚೇರಿಗೆ ಮಹಿಳೆಯರೊಂದಿಗೆ ತೆರಳಿದ ಪ್ರತಿಭಾ ಡಿ.ಗ್ರೂಪ್ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ಬಗ್ಗೆ ವಿಚಾರಿಸಿದ್ದಾರೆ ಈ ಬಗ್ಗೆ ಅಲ್ಲಗಳೆದ ಮೋಹನ್ ನಾನು ಈವರೆಗೆ ಅಂತ ಕೆಲಸ ಮಾಡಿಲ್ಲ ಎಂದಿದ್ದಾರೆ. ಈ ಬಗ್ಗೆ ಸುಮಾರು 20 ನಿಮಿಷ ಮಾತಿನ ಚಕಮಕಿ ನಡೆದಿದೆ ನಂತರ ಮಾದ್ಯಮದೊಂದಿಗೆ ಮಾತನಾಡಿದ ಪ್ರತಿಭಾ ಕುಳಾಯಿ ಕಳೆದ ಹಲವು ಸಮಯದಿಂದ ಡಿ ಗ್ರೂಪ್ ನೌಕರರಾಗಿರುವ ಮಹಿಳೆಯೊಂದಿಗೆ ಮೋಹನ್ ಮಹಿಳೆಯ ಮೈ‌ಮುಟ್ಟಿ ಅಸಭ್ಯ ವರ್ತನೆ ತೋರಿದ್ದಾನೆ, ಮೋಹನ್ ಕೆಲ ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದು ಒಂದು ಬಾರಿ ವರ್ಗಾವಣೆಗೊಂಡು ಬೇರೆ ಕಡೆಗೆ ಹೋಗಿದ್ದು ನಂತರ ವಾಪಾಸ್ಸಾಗಿದ್ದಾನೆ, ಬೇರೆ ಕಡೆಗೆ ವರ್ಗಾವಣೆ ಆಗುದಕ್ಕೆ ಮುಂಚೆ ಕೂಡ ಈ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ, ಆದರೆ ದೂರು ಕೊಡಲು ಈ ಮಹಿಳೆ ಹಿಂಜರಿಯುತ್ತಿದ್ದರು, ಶುಕ್ರವಾರ ಕಿರುಕುಳ ನೀಡುತ್ತಿದ್ದ ಮಹಿಳೆಗೆ ತನ್ನೊಂದಿಕೆ ಸಹಕರಿಸಬೇಕು, ಇದಕ್ಕೆ ಒಪ್ಪುದಾದರೆ, ಸೋಮವಾರ ಹಸಿರು ಸೀರೆ ಉಟ್ಟುಕೊಂಡು ಬರಬೇಕು ಎಂದು ಹೇಳಿದ್ದಾನೆ, ಈ ಬಗ್ಗೆ ಇಂದು ಸಂಜೆ ಪೋಲೀಸು ಠಾಣೆಗೆ ದೂರು ನೀಡಲಾಗುವುದು ಎಂದರು.