ತುಳುವರ ಆಹಾರ ಪದ್ಧತಿ ಆರೋಗ್ಯಪೂರ್ಣ: ಸುನಿಲ್ ಪಲ್ಲಮಜಲು
ಬಂಟ್ವಾಳ : ತುಳುನಾಡಿನ ಕೃಷಿಕರು ಆಟಿ ತಿಂಗಳ ಬಡತನದ ನಡುವೆಯೂ ಪ್ರಕೃತಿ ನೀಡಿದ ಕೊಡುಗೆ ಸ್ವೀಕರಿಸುವ ಮೂಲಕ ತುಳುವರು ಸಿದ್ಧಪಡಿಸುವ ಆಹಾರ ಪದ್ಧತಿ ವೈಜ್ಞಾನಿಕವಾಗಿಯೂ ಆರೋಗ್ಯಪೂರ್ಣವಾಗಿತ್ತು ಎಂದು ಉಪನ್ಯಾಸಕ, ಹವ್ಯಾಸಿ ಯಕ್ಷಗಾನ ಕಲಾವಿದ ಸುನಿಲ್ ಗಾಣಿಗ ಪಲ್ಲಮಜಲು ಹೇಳಿದ್ದಾರೆ.
ಇಲ್ಲಿನ ಪಾಣೆಮಂಗಳೂರು ಸುಮಂಗಲಾ ಸಭಾಂಗಣದಲ್ಲಿ ಗಾಣಿಗರ ಸೇವಾ ಸಂಘದ ವತಿಯಿಂದ ಭಾನುವಾರ ನಡೆದ ‘ಆಟಿದ ತಮ್ಮನ’ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉದ್ಯಮಿಗಳಾದ ರಘು ಶನಿವಾರಸಂತೆ, ವಿಕ್ರಮ್ ಬಂಗೇರ ಸಜಿಪ, , ಸತೀಶ ಕಾಡುಮಠ, ವಸಂತ ಕುಮಾರ್ ಅಣ್ಣಳಿಕೆ, ಪ್ರವೇಶ್ ಪುತ್ರೋಟಿಬೈಲು, ಸಂಘದ ಮಾಜಿ ಉಪಾಧ್ಯಕ್ಷ ತಿಮ್ಮಪ್ಪ ಸಪಲ್ಯ ದೇವಸ್ಯ ಶುಭ ಹಾರೈಸಿದರು.
ಇದೇ ವೇಳೆ ಸ್ಯಾಕ್ಸೋಫೋನ್ ವಾದನ, ನೂತನ ವಧೂ-ವರರರಿಗೆ ಗೌರವಾರ್ಪಣೆ, ವಿವಿಧ ಆಟೋಟ ಸ್ಪರ್ಧೆ ಮತ್ತು ಬಹುಮಾನ ವಿತರಣೆ ನಡೆಯಿತು.
ಸಂಘದ ಗೌರವಾಧ್ಯಕ್ಷ ನರ್ಸಪ್ಪ ಅಮೀನ್, ಯುವ ವೇದಿಕೆ ಅಧ್ಯಕ್ಷ ಭುವನೇಶ್ ಮೊಗರ್ನಾಡು, ಮಹಿಳಾ ವೇದಿಕೆ ಅಧ್ಯಕ್ಷೆ ಆಶಾ ವೇದವ ಗಾಣಿಗ ಮತ್ತಿತರರು ಇದ್ದರು.
ಸಂಘದ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಸ್ವಾಗತಿಸಿ, ಕೋಶಾಧಿಕಾರಿ ವೇದವ ಗಾಣಿಗ ವಂದಿಸಿದರು. ಲಿಖಿತಾ ಶಂಭೂರು ಕಾರ್ಯಕ್ರಮ ನಿರೂಪಿಸಿದರು.

