ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟೇಬಲ್ (ರಿ) ವತಿಯಿಂದ ವಿದ್ಯಾರ್ಥಿ ವೇತನ, ಧನ ಸಹಾಯ ವಿತರಣೆ

0
8

ಕಳೆದ ಇಪ್ಪತ್ತಮೂರು ವರುಷಗಳಿಂದ ಸಾಮಾಜಿಕ ಸೇವಾ ಮತ್ತು ಮಾಧ್ಯಮ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್ (ರಿ.) ಮಂಗಳೂರು ಇದರ ಆಶ್ರಯದಲ್ಲಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ಇತ್ತೀಚೆಗೆ ಪಡೀಲ್ ಬೈರಾಡಿ ಕೆರೆ ಬಳಿಯ ಆತ್ಮಶಕ್ತಿ ಸೌಧದಲ್ಲಿ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಸಹಾಯಕರಿಗೆ ಧನ ಸಹಾಯ ವಿತರಣಾ ಕಾರ್ಯಕ್ರಮ ಜರುಗಿತು.

ಟ್ರಸ್ಟ್ನ ಗೌರವಧ್ಯಕ್ಷರಾದ ವಾಮನ್ ಕುದ್ರೋಳಿ ಇವರು ಮಾತನಾಡಿ “ಶಿಕ್ಷಣದಿಂದ ಎಲ್ಲವೂ ಸಾಧ್ಯ,, ಬಡ ವಿದ್ಯಾರ್ಥಿಗಳು ಇಂದು ವಿದ್ಯೆಯಿಂದ ವಂಚಿತರಾಗಬೇಕಾದ್ದಿಲ್ಲ, ಆರ್ಥಿಕ ಸಹಾಯ ಬೇರೆ ಬೇರೆ ಮೂಲಗಳಿಂದ ದೊರಕುತ್ತದೆ ಅದರ ಸದುಪಯೋಗ ಪಡೆದುಕೊಳ್ಳಬೇಕು” ಎಂದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ (ನಿ.) ಮಂಗಳೂರು ಇದರ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರು ಮಾತನಾಡಿ “ಆರ್ಥಿಕ ಸುದೃಢತೆ ಇಂದಿನ ಅಗತ್ಯವಾಗಿದೆ. ಅದಕ್ಕೆ ಪೂರಕವಾಗಿ ಮಕ್ಕಳು ಶಿಕ್ಷಣದಿಂದ ಶ್ರೀಮಂತರಾಗಬೇಕು” ಎಂದರು.

ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಇದರ ಅಧ್ಯಕ್ಷರಾದ ಚಿತ್ತರಂಜನ್ ಕೆ ಇವರು ಮಾತನಾಡಿ “ವಿದ್ಯಾರ್ಥಿಗಳಿಗೆ ಹಾಗೂ ಅಸಹಾಯಕರಿಗೆ ದೇವರು ಸದಾ ಅನುಗ್ರಹಿಸುತ್ತಿರಲಿ” ಎಂದು ಹಾರೈಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟ್ನ ಅಧ್ಯಕ್ಷರಾದ ಗೋಪಾಲ್ ಪೂಜಾರಿ ವೀರನಗರ ಇವರು ಮಾತನಾಡಿ “ಸಾಮಾಜಿಕ ಸಂಸ್ಥೆಯಿAದ ಆರ್ಥಿಕ ನೆರವನ್ನು ಪಡೆದುಕೊಂಡವರು ಮುಂದಕ್ಕೆ ತಾವೂ ಸಾಮಾಜಿಕ ಚಿಂತನೆಯತ್ತ ಚಿತ್ತವನ್ನು ಹರಿಸಬೇಕು” ಎಂದರು. ಈ ಸಂದರ್ಭದಲ್ಲಿ ನೂರಕ್ಕೂ ಮಿಕ್ಕಿದ ಮಂದಿಗೆ ವಿದ್ಯಾರ್ಥಿ ವೇತನ, ಧನ ಸಹಾಯವನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರುಗಳಾದ ಪರಮೇಶ್ವರ ಪೂಜಾರಿ, ಆನಂದ್ ಕೊಂಡಾಣ, ರಮನಾಥ ಸನಿಲ್, ದಿವಾಕರ್ ಬಿ. ಪಿ, ಚಂದ್ರಾವತಿ, ಉಮಾವತಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಟ್ರಸ್ಟ್ನ ಕೋಶಾಧಿಕಾರಿ ಬಾಬು ಎಸ್ ಕರ್ಕೇರ, ಟ್ರಸ್ಟಿ ಸುಜಾತಾ ಗೋಪಾಲ್ ಮುಂತಾದವರು ಉಪಸ್ಥಿತರಿದ್ದರು. ಟ್ರಸ್ಟ್ ಕಾರ್ಯದರ್ಶಿ ಗೋಪಾಲ್ ಎಂ ಫಲಾನುಭವಿಗಳ ಪಟ್ಟಿ ವಾಚಿಸಿದರು, ಜೊತೆ ಕಾರ್ಯದರ್ಶಿ ವಿಶ್ವನಾಥ್ ಪೂಜಾರಿ ರೆಂಜಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.