ಉಡುಪಿ ಜಿಲ್ಲಾ ಮಾಜಿ-ಸೈನಿಕರ ವಿವಿಧೋದ್ಧೇಶ ಸಹಕಾರ ಸಂಘದ 2025-26ನೇ ಮಹಾಸಭೆಯು ಜುಲೈ 26ರಂದು ಅಂಬೇಡ್ಕರ್ ಸಮುದಾಯ ಭವನ ಆದಿಉಡುಪಿಯಲ್ಲಿ ಸಂಘದ ಅಧ್ಯಕ್ಷರಾದ ಕರ್ನಲ್ ಡಾ.ಎಫ್.ಇ.ಎ ರೋಡ್ರಿಗಸ್ (ರಿ.)ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಅಧ್ಯಕ್ಷರು ಮಾತನಾಡಿ ಸಂಘವು ಸತತವಾಗಿ “ಎ” ಗ್ರೇಡ್ ಅಡಿಟ್ ವರ್ಗೀಕರಣವನ್ನು ಪಡೆದಿದ್ದು 2025-26ನೇ ಸಾಲಿನಲ್ಲಿ ಒಟ್ಟು ರೂ.325ಕೋಟಿ ವ್ಯವಹಾರ ನಡೆಸಿದ್ದು ರೂ.40ಕೋಟಿ ಸಾಲ ವಿತರಣೆ ಹೊರಬಾಕಿಯನ್ನು ಹೊಂದಿದೆ. ರೂ.1.79ಕೋಟಿ ನಿವ್ವಳ ಲಾಭಗಳಿಸಿ ಸದಸ್ಯರಿಗೆ 2025-26ರಲ್ಲಿ ಶೇ.22% ಡಿವಿಡೆಂಡ್ ಘೋಷಿಸಲಾಗಿದೆ.ತ್ವರಿತ ಸೇವೆಯ ಮೂಲಕ ಸಂಘದ ಸರ್ವ ಸದಸ್ಯರಿಗೆ ಹಾಗೂ ಮಾಜಿ-ಸೈನಿಕರ ಆಶೋತ್ತರಗಳಿಗೆ ಸಂಘವು ಸ್ಪಂದಿಸುತ್ತಾ ವ್ಯವಹರಿಸುತ್ತಿದೆ ಎಂದು ತಿಳಿಸಿದರು.2025-26ನೇ ಸಾಲಿನಲ್ಲಿ ಸಂಘವು ಶೇ.99 ಸಾಲ ವಸೂಲಾತಿ ಸಾಧನೆ ಮಾಡಿದೆ ಎಂದು ತಿಳಿಸಿದರು.
ಸನ್ಮಾನ : ಉಡುಪಿ ಜಿಲ್ಲಾ ಮಾಜಿ-ಸೈನಿಕರ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ವೇದಿಕೆಯ ಜಂಟಿಯಾಗಿ 80ವರ್ಷ ಮೇಲ್ಪಟ್ಟ ಮಾಜಿ-ಸೈನಿಕರಾದ(ಂಗಿಒ, ರಮೇಶ್ ಕಾರ್ಣಿಕ್, (ಖeಣಜ),Sub ಒಚಿರಿ.ಪಿ.ರಾಧಾಕೃಷ್ಣ ಶೆಣೈ, Sub ಒಚಿರಿ ದಿನೇಶ್ ಕಿಣಿ, Sub ಕ್ಲೇಮೆಂಟ್ ಡಿ’ಸಿಲ್ವ,ಅPಐ ಫೆರ್ನಾಂಡಿಸ್ ಡೆಸ್ಮಂಡ್ ಪೀಟರ್, ಅPಐ ವಲ್ಲೇರಿಯನ್ ನರೋನ್ಹ, ಅPಐ ದಿನೇಶ್ ನಾಯಕ್, Seಠಿoಥಿ ಕೆ.ರಮೇಶ್) ಇವರಿಗೆ ಸನ್ಮಾನಿಸಲಾಯಿತು ಮತ್ತು ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು ಇವರನ್ನು ಸನ್ಮಾನಿಸಲಾಯಿತು. 90% ಮೇಲ್ಪಟ್ಟ ಎಸ್.ಎಸ್.ಎಲ್.ಸಿ , ಪಿ.ಯು.ಸಿ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಕಮಡೋರ್ ಜೆರೋಮ್ ಕ್ಯಾಸ್ಟಲಿನ್‌ರವರು ವಂದಿಸಿದರು.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಪರಮಶಿವರವರು ವರದಿಯನ್ನು ಮಂಡಿಸಿದರು.ಸಂಘದ ನಿರ್ದೇಶಕರಾದ ಗಣೇಶ್ ರಾವ್, ಗಣಪಯ್ಯ ಶೇರಿಗಾರ್, ಗಿಲ್ಬರ್ಟ್ ಬ್ರಿಗಾಂಝಾ, ಪ್ರಭಾಕರ ನಾಯ್ಕತಿ ತುಳಸಿ ದೇವಾಡಿಗ,ಸುಮತಿ ಶ್ರೀಧರ್, ಕೆ.ಡೊರೊತಿ ಕ್ರಾಸ್ತಾ ವಿಶ್ವನಾಥ ಹಂದೆ, ರಾಘವೇಂದ್ರ ಪಿ.ಎಸ್, ಕಿರಣ್ ಪೈ, ದಯಾನಂದ ಸಿ.ಪುತ್ರನ್, ಸಂತೋಷ್ ನಾಯ್ಕ ಇವರು ಉಪಸ್ಥಿತರಿದ್ದರು.

