ಮೂಲ್ಕಿ : ತುಳುನಾಡ ಗೀತೆ ದಿನಾಚರಣೆ

0
20

ತುಳುವರ್ಲ್ಡ್ ಫೌಂಡೇಶನ್ ಕಟೀಲು ಮತ್ತು ತುಳು ಮಹಾಸಭಾ ಮೂಲ್ಕಿ ವಲಯದ ಸಹಯೋಗದಲ್ಲಿ ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 28 2026ರಂದು “ತುಳುನಾಡ ಗೀತೆ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ತುಳು ವರ್ಲ್ಡ್ ಫೌಂಡೇಶನ್’ನ ಅಧ್ಯಕ್ಷರಾದ ಭಾನುಮತಿ ಶೆಟ್ಟಿ ಕಕ್ವಗುತ್ತು ಅವರು ವಹಿಸಿದ್ದರು. ಮುಲ್ಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ವಾಸುದೇವ ಬೆಳ್ಳೆ ಅವರು ತುಳುನಾಡು, ತುಳು ಭಾಷಾ ಹೋರಾಟದ ಇತಿಹಾಸ ಹಾಗೂ ತುಳು ಜನರ ಜವಾಬ್ದಾರಿಯ ಕುರಿತು ಮಾತನಾಡಿದರು.

ಮೋಹನಪ್ಪ ತಿಂಗಳಾಯ ವಿರಚಿತ ತುಳುನಾಡ ಗೀತೆಯನ್ನು ಪ್ರಮೋದ್ ಸಪ್ರೆ ರಚಿಸಿ ಹಾಡಿದರು. ತುಳುವಿಶ್ವ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು ಅವರು ತುಳುವರ್ಲ್ಡ್ ಫೌಂಡೇಶನ್ ಕುರಿತು ಸಂಕ್ಷಿಪ್ತ ವಿವರಣೆ ನೀಡಿದರು. ಈ ಸಂದರ್ಭದಲ್ಲಿ, ಕಸ್ತೂರಿ ಪಂಜ ಅವರಿಗೆ “ತುಳು ಅಪ್ಪೆ ಸಿರಿ” ಎಂಬ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಅವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯಸ್ಥೆ ಜಯಲಕ್ಷ್ಮಿ ಟಿ. ನಾಯಕ್, ಹರ್ಷರಾಜ್ ಶೆಟ್ಟಿ, ಸರೋಜಿನಿ ಸುವರ್ಣ, ಜಯಪಾಲ್ ಶೆಟ್ಟಿ ಐಕಳ, ಲತಾ ಶೇಖರ್, ಪ್ರಶಾಂತ್ ಶೆಟ್ಟಿ, ದಿನೇಶ್ ಶೆಟ್ಟಿ, ಶಂಕರ್ ಪಡಂಗ, ಲೀಲಾ ಬಂಜನ್, ಗರೀನಾ ನಿಶ್ಚಿತಾ ಮತ್ತಿತರರು ಉಪಸ್ಥಿತರಿದ್ದರು.ತುಳು ಮಹಾಸಭಾ ಕೇಂದ್ರ ಸಮಿತಿ ಸಂಚಾಲಕ ಅರವಿಂದ ಬೆಳ್ಚಡ ಅತಿಥಿಗಳನ್ನು ಸ್ವಾಗತಿಸಿದರು. ತುಳು ಮಹಾಸಭಾ ಮೂಲ್ಕಿ ವಲಯ ಪ್ರಧಾನ ಸಂಚಾಲಕ ಮಾಹಿ ಮೂಲ್ಕಿ ಕಾರ್ಯಕ್ರಮ ನಿರ್ವಹಿಸಿದರು.