ಮೂಡುಬಿದಿರೆ : ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಕಡಂದಲೆ–ಪಾಲಡ್ಕದ ಸೇವಾದಳ ವತಿಯಿಂದ ಮಳೆ ಕಾರಣದಿಂದ ಸೋರುತ್ತಿದ್ದ ಬಡ ಕುಟುಂಬದ ಮನೆಗೆ ತಾತ್ಕಾಲಿಕವಾಗಿ ಟಾರ್ಪಲ್ ಅಳವಡಿಸಿ ಮಾನವೀಯ ನೆರವು ನೀಡಲಾಯಿತು.
ಸಂಘದ ಸದಸ್ಯ ಸೋಮಶೇಖರ್ ಪೂಜಾರಿ ಅವರ ಮನವಿಯ ಮೇರೆಗೆ ಸೇವಾದಳದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ, ಮಳೆಯಿಂದ ಕುಟುಂಬಕ್ಕೆ ಆಗುತ್ತಿದ್ದ ತೊಂದರೆಯನ್ನು ಮನಗಂಡು ತಕ್ಷಣವೇ ಟಾರ್ಪಲ್ ಅಳವಡಿಸಿ ಮನೆಯೊಳಗೆ ನೀರು ಸೋರದಂತೆ ವ್ಯವಸ್ಥೆ ಮಾಡಿದರು.

ಈ ಸೇವಾ ಕಾರ್ಯದಲ್ಲಿ ಸೇವಾದಳದ ಅಧ್ಯಕ್ಷ ಸೀತಾರಾಮ್ ಸಾಲ್ಯಾನ್ ಅವರ ನೇತೃತ್ವದಲ್ಲಿ ಪ್ರಮೋದ್ ಸಾಲ್ಯಾನ್, ಪುಷ್ಪರಾಜ್ ಪೂಜಾರಿ, ಸೌಜನ್ ಸಾಲ್ಯಾನ್, ಜಯಂತ್ ಸಾಲ್ಯಾನ್, ಜಗದೀಶ್ ಸಾಲ್ಯಾನ್ ಪೂಪಾಡಿಕಲ್ಲು,ಸೋಮಶೇಖರ್ ಪೂಜಾರಿ, ವೆಂಕಟೇಶ್ ನಾಯ್ಕ್, ನಿತೀನ್ ಪೂಜಾರಿ, ರಕ್ಷಣ್ ಸಾಲ್ಯಾನ್, ದರ್ಶಿತ್ ಪೂಜಾರಿ ಹಾಗೂ ಜಾನು ಪೂಪಾಡಿಕಲ್ಲು ಭಾಗವಹಿಸಿದ್ದರು.
ಸೇವಾದಳದ ಈ ಮಾನವೀಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

