ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಬಳಸಲಾದ ಅವಹೇಳನಕಾರಿ ಹಾಗೂ ಅಸಭ್ಯ ಪದಗಳು ದೇಶದಾದ್ಯಂತ ಕೋಟ್ಯಾಂತರ ಬಿಜೆಪಿ ಕಾರ್ಯಕರ್ತರು ಮತ್ತು ನಮೋ ಅಭಿಮಾನಿಗಳಲ್ಲಿ ಆಕ್ರೋಶವನ್ನು ಉಂಟುಮಾಡಿದ್ದವು.
ಆ ಆಕ್ರೋಶವೇ ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ ಅವರ ಧ್ವನಿಯ ಮೂಲಕ ಪ್ರತಿಧ್ವನಿಸಿತು.
ಪ್ರಧಾನಿಯವರ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸುವಾಗ, ಈ ನಕಲಿ ಗಾಂಧಿ ಪರಿವಾರದ ಅನುಯಾಯಿಗಳಿಗೆ “ಸಭ್ಯ ರಾಜಕಾರಣ” ಮತ್ತು “ಸುಸಂಸ್ಕೃತ ರಾಜಕಾರಣದ” ಮೌಲ್ಯಗಳು ಮರೆತುಹೋಗಿದ್ದವೆಯೇ?
ಕಾಕ್ರೋಚ್ ಗಳಿಗೆ ತೆರೆಯ ಹಿಂದೆ ನಿಂತು ಈ ಪ್ರತಿಭಟನೆಗೆ ನಿರ್ದೇಶನ ನೀಡುತ್ತಿದ್ದ ನಕಲಿ ಗಾಂಧಿ ಪರಿವಾರ ಹಾಗೂ ಅವರ ಬೆಂಬಲಿಗರಿಂದ ರಾಜಕಾರಣ ಕಲಿಯುವ ಪರಿಸ್ಥಿತಿ ಉಡುಪಿಯ ಶಾಸಕರಾದ ಯಶ್ಪಾಲ್ ಸುವರ್ಣ ಅವರಿಗೆ ಬಂದಿಲ್ಲ ಎಂದು ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾದ ಸಚಿನ್ ಸುವರ್ಣ ಪಿತ್ರೋಡಿ ತಿಳಿಸಿದ್ದಾರೆ.

