ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಕಲಾ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಬಹುವಚನಂ ಪುತ್ತೂರು ಇದರ ಮುಖ್ಯಸ್ಥರಾದ ಡಾ.ಶ್ರೀಶ ಕುಮಾರ್ ಎಂ.ಕೆ ಇವರು ಆಗಮಿಸಿ ದೀಪ ಪ್ರಜ್ವಲನೆಗೈದು, ಕಾರ್ಯಕ್ರಮ ಉದ್ಘಾಟಿಸಿ “ಜಲ ಯೋಧರಾಗೋಣ ಬನ್ನಿ” ಎನ್ನುವ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ ನೀಡಿದರು.

ನೀರಿನ ಮಹತ್ವವನ್ನು ಅರಿಯುವುದು ಮತ್ತು ಅದನ್ನು ಉಳಿಸುವುದುಇವೆರಡರನಡುವೆ ದೊಡ್ಡ ಅಂತರವಿದೆ. ಇಂದುನೀರಿನ ಕೊರತೆ ಕೇವಲ ಬರಪೀಡಿತ ಪ್ರದೇಶಗಳ ಸಮಸ್ಯೆಯಲ್ಲ ನಗರಗಳಲ್ಲಿಯೂ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಜಲ ಯೋಧರಾಗುವ ಅಗತ್ಯವಿದೆ ಎಂದು ತಿಳಿಸುತ್ತಾಹತ್ತು ವಿಧಾನಗಳ ಮೂಲಕ ಮಳೆನೀರು ಸಂರಕ್ಷಣೆಯ ಕುರಿತ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ದೇವಿಚರಣ್ ರೈ ಎಂ. ವಹಿಸಿದ್ದರು. ಈ ಸಂದರ್ಭದಲ್ಲಿ ಕಲಾ ಸಂಘದ ಸಂಯೋಜಕರಾದ ಉಪನ್ಯಾಸಕಿ ಮೊನೀಷಾ ಎನ್, ಅಧ್ಯಕ್ಷರಾದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಕ್ಷಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕ್ಷಮಾ ಪಿ ಸ್ವಾಗತಿಸಿ, ದೀಕ್ಷಾ ಎಂ. ಬಿ ನಿರೂಪಿಸಿ,ರಕ್ಷಿತಾ ವಂದಿಸಿದರು.

