ಉಡುಪಿ : ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ (ಯುಸಿಇಎ) ವತಿಯಿಂದ ಕಿದಿಯೂರು ಹೊಟೇಲ್‌ನ ಅನಂತಶಯನ ಹಾಲ್‌ನಲ್ಲಿ ಬುಧವಾರ ಎಂಜಿನಿಯರ್ಸ್ ಮೀಟ್ ನೆಡೆಯಿತು .

ಮುಖ್ಯ ಅತಿಥಿಯಾಗಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಭವಿಷ್ಯದ ದ್ರಷ್ಠಿಯಿಂದ ಉಡುಪಿ ಅಭಿವೃದ್ಧಿಯ ಬಗ್ಗೆ ಮಾಸ್ಟರ್ ಪ್ಲಾನ್ ತಯಾರಿಸಿದ್ದು , ಅದಕ್ಕೆ ಪೂರಕವಾದ ಸೂಕ್ತ ಸಲಹೆ ಸೂಚನೆ ನೀಡುವಂತೆ ವಿನಂತಿಸಿದರು , ಉಡುಪಿ ಪ್ರಸಿದ್ಧಿ ಜತೆಗೆ ವೇಗದ ಪ್ರಗತಿ ಹೊಂದಲು ಎಂಜಿನಿಯರ್ಸï ಗಳ ಕೊಡುಗೆ ಅಪಾರ , ರಸ್ತೆ, ಕಟ್ಟಡಗಳ ನಿರ್ಮಾಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶ್ಲಾಘನೀಯ. ಉಡುಪಿ ನಗರದ ಸೌಂದರ್ಯ ಹೆಚ್ಚಳಕ್ಕೂ ಎಂಜಿನಿಯರ್ ಗಳು ಕೈ ಜೋಡಿಸುವಂತೆ ಕರೆನೀಡಿದರು. (ಯುಸಿಇಎ) ವತಿಯಿಂದ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ಮಂಜುನಾಥ್ ಗೌರವಿಸಲಾಯಿತು ವೇದಿಕೆಯಲ್ಲಿ ಇತ್ತೀಚಿಗೆ ನಿರ್ಮಾಣ ಗೊಂಡ ” ಅಭಿನಯ” ಕಿರುಚಿತ್ರ ಪ್ರದರ್ಶನ ಗೊಂಡಿತ್ತು , ಸಂಸ್ಥೆಯ ವತಿಯಿಂದ ಕಥೆ ನಿರೂಪಕ ನಿರ್ದೇಶಕರಾದ ಗಣೇಶ್ ಕಾಂಡ್ಲೂರು ರವರನ್ನು ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಕೆ. ರಂಜನ್ ಸ್ವಾಗತಿಸಿದರು, ಉಪಾಧ್ಯಕ್ಷರಾದ ಗಣೇಶ್ ಬೈಲೂರು,ಭರತ್ ಭೂಷಣ್, ಪ್ರಧಾನ ಕಾರ್ಯದರ್ಶಿ ಕೆ. ಹರೀಶ್ ಕುಮಾರ್ ನಿರೂಪಿಸಿ, ವಂದಿಸಿದರು, ಸಂಘದ ಪಧಾದಿಕಾರಿಗಳು, ಸದಸ್ಯರು ಉಪಸ್ಥರಿದ್ದರು.

