ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇಶಾದ್ಯಂತ 64 ಸ್ಥಳಗಳಲ್ಲಿ ಮತ್ತು ಉಡುಪಿ ಹಾಗೂ ಕಾರ್ಕಳದಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’ವು ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ !

0
14

ಹಿಂದೂಗಳು ‘ಸ್ವಬೋಧ’ ಮತ್ತು ‘ಶತ್ರುಬೋಧ’ವನ್ನು ಜಾಗೃತವಾಗಿಟ್ಟುಕೊಂಡು ದೇಶ ಹಾಗೂ ಧರ್ಮದ ರಕ್ಷಣೆಗಾಗಿ ಸಂಘಟಿತರಾಗಿ !
ಶ್ರೀಮತಿ ಆಶ್ವಿನಿ ನಾಯಕ್, ಹಿಂದೂ ಜನಜಾಗೃತಿ ಸಮಿತಿ

ಉಡುಪಿ : ‘‘ಇಂದು ದೇಶ ಹಾಗೂ ಧರ್ಮದ ಮೇಲಾಗುತ್ತಿರುವ ಆಘಾತಗಳು ಕೇವಲ ಗಡಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಅವು ನೇರವಾಗಿ ನಮ್ಮ ಮನೆಬಾಗಿಲಿಗೆ ಬಂದು ತಲುಪಿವೆ. ಭಯೋತ್ಪಾದನೆ ಮತ್ತು ನುಸುಳುವಿಕೆಯೊಂದಿಗೆ, ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’, ‘ವಕ್ಫ್ ಬೋರ್ಡ್‌’ ಮತ್ತು ಇತ್ತೀಚೆಗೆ ಬೆಳಕಿಗೆ ಬಂದಿರುವ ‘ಕಾರ್ಪೊರೇಟ್ ಜಿಹಾದ್’ ಮುಂತಾದ ವಿವಿಧ ಆಘಾತಗಳು ಹಾಗೂ ಷಡ್ಯಂತ್ರಗಳ ಮಾಧ್ಯಮದಿಂದ ಹಿಂದೂಗಳನ್ನು ಯೋಜನಾಬದ್ಧವಾಗಿ ಗುರಿಯಾಗಿಸಲಾಗುತ್ತಿದೆ. ಇದರ ಮೂಲಕ ದೇಶದ ಭೂ-ರಾಜಕೀಯ ನಕ್ಷೆ ಮತ್ತು ಜನಸಂಖ್ಯಾ ಸ್ಪೋಟದ ಗಣಿತವನ್ನು ಬದಲಾಯಿಸುವ ಭೀಕರ ಷಡ್ಯಂತ್ರವನ್ನು ರೂಪಿಸಲಾಗುತ್ತಿದೆ.

ಹಿಂದೂ ಸಮಾಜವು ತನ್ನ ‘ಸ್ವಬೋಧ’ (ಸಾಮರ್ಥ್ಯ ಮತ್ತು ಧರ್ಮಜ್ಞಾನ) ಹಾಗೂ ‘ಶತ್ರುಬೋಧ’ (ಶತ್ರುವಿನ ಗುಪ್ತ ರಣನೀತಿ)ವನ್ನು ಜಾಗೃತಗೊಳಿಸದ ಹೊರತು, ಈ ಎಲ್ಲಾ ದಿಕ್ಕುಗಳಿಂದ ಆಗುತ್ತಿರುವ ಆಘಾತಗಳನ್ನು ಪ್ರತಿರೋಧಿಸುವುದು ಅಸಾಧ್ಯ. ಆದ್ದರಿಂದ ಹಿಂದೂಗಳು ಇನ್ನು ಮುಂದೆ ಕೇವಲ ಮೂಕಪ್ರೇಕ್ಷಕರಾಗಿರದೆ, ದೇಶ ಮತ್ತು ಧರ್ಮದ ರಕ್ಷಣೆಗಾಗಿ ಸಕ್ರಿಯವಾಗಿ ಮುಂದಾಗಬೇಕು,’’ ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀಮತಿ ಆಶ್ವಿನಿ ನಾಯಕ್ ಅವರು ಸ್ಪಷ್ಟ ಮತ್ತು ಪ್ರಖರ ವಿಚಾರಗಳನ್ನು ವ್ಯಕ್ತಪಡಿಸಿದರು.

ಅವರು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮೆಯಲ್ಲಿ ‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಘರ್ಷ ಮತ್ತು ಸಾಧನೆಯ ದಿಶೆ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ 29 ರಂದು ದೇಶಾದ್ಯಂತ 64 ಸ್ಥಳಗಳಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ಗಳನ್ನು ಆಯೋಜನೆ ಮಾಡಲಾಯಿತು.

ಮುಂಬರುವ ವಿಶ್ವಯುದ್ಧ ಮತ್ತು ತುರ್ತು ಪರಿಸ್ಥಿತಿಯ ಆತಂಕವನ್ನು ಗಮನದಲ್ಲಿಟ್ಟುಕೊಂಡು, ಸಮಿತಿಯ ವತಿಯಿಂದ ಹಿಂದೂಗಳಿಗೆ ಪ್ರಥಮ ಚಿಕಿತ್ಸೆ (ಫಸ್ಟ್ ಏಡ್), ಅಗ್ನಿಶಾಮಕ ಮತ್ತು ಸ್ವರಕ್ಷಣಾ ತರಬೇತಿಯನ್ನು ಪಡೆದುಕೊಳ್ಳುವಂತೆ ಆವಾಹನೆ ಮಾಡಲಾಯಿತು.

ಉಡುಪಿಯಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಮೂಡುಸಗ್ರಿ ಉಡುಪಿ, ಇಲ್ಲಿನ ಧರ್ಮದರ್ಶಿಗಳಾದ ಶ್ರೀ ಶ್ರೀ ರಮಾನಂದ ಗುರೂಜಿ ಇವರು ಮಾತನಾಡಿ, ದೇವರ ಅನುಭವ ಪಡೆಯಲು ಪರಿಶುದ್ಧ ವಾತಾವರಣ, ಪರಿಶುದ್ಧ ಮನಸ್ಸು ಹಾಗೂ ಸಾತ್ವಿಕರ ಒಡನಾಟ ಅಗತ್ಯ. ಇಂತಹ ಪವಿತ್ರ ವಾತಾವರಣವನ್ನು ಪಡೆಯಲು ದೇವಸ್ಥಾನಗಳಿಗೆ ತೆರಳಿ, ನಿಯಮಿತವಾಗಿ ಸಾಧನೆ ಮಾಡುವುದು ಬಹಳ ಮಹತ್ವದ್ದಾಗಿದೆ ಎಂದರು.

ಹಾಗೇ, ಕಾರ್ಕಳದ ಗುರುಪೂರ್ಣಿಮಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಮೂಡುಬಿದಿರೆಯ ಮಯೂರಿ ಟೆಕ್ಸ್ಟೈಲ್ಸ್ ನ ಮಾಲಕರಾದ ಶ್ರೀ ರಾಜೇಂದ್ರ ಕುಮಾರ್ ಜೈನ್ ಇವರು ಮಾತನಾಡಿ, ಇಂದು ರಾಷ್ಟ್ರ ಹಾಗೂ ಹಿಂದೂ ಧರ್ಮದ ಮೇಲೆ ವಿವಿಧ ರೀತಿಯಿಂದ ಆಘಾತಗಳು ನಡೆಯುತ್ತಾ ಇದೆ. ಹಿಂದೂಗಳನ್ನು ಒಡೆಯುವ ಪ್ರಯತ್ನಗಳು ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಇದನ್ನೆಲ್ಲಾ ನಾವು ಸಂಘಟಿತರಾಗಿ ಎದುರಿಸಬೇಕಾಗಿದೆ ಎಂದು ಹೇಳಿದರು.

ಈ ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆ (ಗುರುಪೂಜೆ), ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸಂದೇಶ ವಾಚನ, ರಾಮರಾಜ್ಯದ ಸ್ಥಾಪನೆಗಾಗಿ ಸಂಕಲ್ಪ ಮತ್ತು ನಾಮಜಪ, ಧರ್ಮರಕ್ಷಕರು ಹಾಗೂ ಹಿಂದುತ್ವನಿಷ್ಠರ ಸತ್ಕಾರ, ರಾಷ್ಟ್ರಭಕ್ತ ಮತ್ತು ಧರ್ಮನಿಷ್ಠ ಗಣ್ಯರ ಮಾರ್ಗದರ್ಶನ, ಸ್ವರಕ್ಷಣೆಯ ಸುಲಭ ಪದ್ಧತಿಗಳ ಪ್ರತ್ಯಕ್ಷ ಪ್ರದರ್ಶನ (ಡೆಮೋ), ಹಾಗೂ ‘ಸಮಿತಿ’ಯ ಪ್ರೇರಣಾಸ್ಥಾನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕಾರ್ಯವನ್ನಾಧರಿಸಿದ ಕಿರುಚಿತ್ರ (ಡಾಕ್ಯುಮೆಂಟರಿ) ಪ್ರದರ್ಶಿಸಲಾಯಿತು. ಈ ಮಹೋತ್ಸವದಲ್ಲಿ ವಿವಿಧ ವಿಷಯಗಳ ಮೇಲಿನ ಗ್ರಂಥ-ಪ್ರದರ್ಶನ ಹಾಗೂ ರಾಷ್ಟ್ರ-ಧರ್ಮ ವಿಷಯದ ಫಲಕ-ಪ್ರದರ್ಶನ (ಫ್ಲೆಕ್ಸ್ ಬೋರ್ಡ್) ಕೂಡ ಏರ್ಪಡಿಸಲಾಗಿತ್ತು. ಅನೇಕ ಜನರು ಇದರ ಲಾಭ ಪಡೆದುಕೊಂಡರು.