ಉಡುಪಿ: ಜೆಸಿ ವಲಯ 15ರ ಪ್ರತಿಷ್ಠಿತ ಘಟಕ ಗಳಲ್ಲಿ ಒಂದಾದ ಜೆಸಿಐ ಉಡುಪಿ ಸಿಟಿ ವತಿಯಿಂದ ಜುಲೈ 31 ರಂದು ಒಂದೇ ದಿನ 111 ತರಬೇತಿ ಸರಣಿಯನ್ನು ಉಡುಪಿಯ ಸೈಂಟ್ ಮೇರಿಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಉದ್ಘಾಟನೆ ಮಾಡಲಾಯಿತು.
ಜೆಸಿಐ ವಲಯ 15ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಯುವಜನತೆ
ಜೆಸಿ ಮೂಲಕ ಅನೇಕ ವ್ಯಕ್ತಿತ್ವ ವಿಕಸನಗಳ ಲಾಭಗಳನ್ನು ಪಡೆಯಬಹುದು. ಈ ರೀತಿ ತರಬೇತಿ ಕಾರ್ಯಕ್ರಮಗಳ ಸರಣಿ ನಮ್ಮ ವಲಯದ ಒಂದು ಮೈಲಿಗಲ್ಲು ಎಂದು ಶುಭ ಹಾರೈಸಿದರು.
ಶಾಲಾ ಪ್ರಾಂಶುಪಾಲರಾದ ಫಾ. ವಿಜಯ್ ಜಾಯ್ಸನ್ ಡಿಸೋಜಾ, ಮುಖ್ಯ ಅತಿಥಿಗಳಾಗಿ ಜೆಸಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು . ವಿದ್ಯಾರ್ಥಿಗಳು ಕೇವಲ ಪಾಠ ಮಾತ್ರವಲ್ಲ ಜೀವನದ ಮೌಲ್ಯಗಳನ್ನು ಕೂಡ ಕಲಿಯಬೇಕು ಈ ರೀತಿಯಾದ ತರಬೇತಿಗಳು ನಮ್ಮ ಬದುಕು ರೂಪಿಸಲು ಸಹಕಾರಿ ಎಂದರು.
ವಲಯ ತರಬೇತಿ ವಿಭಾಗದ ನಿರ್ದೇಶಕ ದೀಪಕ್ ರಾಜ್, ಮಾತನಾಡಿ ಅಕಾಡೆಮಿಕ್ ಎಜುಕೇಶನ್ ಗಿಂತ ಭಿನ್ನವಾದ ವಿಶಿಷ್ಟ ತರಬೇತಿಗಳು ಸಿಗಬೇಕಾದರೆ ಜೆಸಿ ಸಂಸ್ಥೆಗೆ ಬರಬೇಕು ಎಂದರು. 18 ವರ್ಷ ಆದ ಕೂಡಲೇ ಜೆಸಿ ಸಂಸ್ಥೆಗೆ ಸೇರಿಕೊಂಡರೆ ಜೀವನದಲ್ಲಿ ಅಪರಮಿತ ಅವಕಾಶಗಳು ಲಭ್ಯ ಎಂದು ಹೇಳಿದರು.
ವಲಯ ಉಪಾಧ್ಯಕ್ಷೆ ಡಾ. ಹರಿಣಾಕ್ಷಿ ಕರ್ಕೇರ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಪ್ರಗತಿಪರ ಮಟ್ಟು ಗುಳ್ಳ ಕೃಷಿಕ ಹರೀಶ್ ರವರಿಗೆ ಸಲ್ಯೂಟ್ ಟು ದ ಸೈಲೆಂಟ್ ಸ್ಟಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜೆಸಿ ಬಗ್ಗೆ ಮಾಹಿತಿಗಳನ್ನ ಒಳಗೊಂಡ ಕರಪತ್ರ ಮತ್ತು
ಜೆಸಿಐ ಉಡುಪಿ ಸಿಟಿಯ ಘಟಕದ ಗೃಹ ಪತ್ರಿಕೆ ಉಡುಪಿ ಸಿಟಿ ವೇವ್ಸ್ ಬಿಡುಗಡೆ ಮಾಡಲಾಯಿತು. ತರಬೇತಿ ಸರಣಿಯ ಸಹಪ್ರಾಯೋಜಕರಾದ ಕಾರ್ಕಳ ಅಶೋಕ್ ರಾವ್ ಚಾರಿಟೇಬಲ್ ಟ್ರಸ್ಟ್ ನ ದಿನೇಶ್ ರಾವ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ ಉಡುಪಿ ಸಿಟಿ ಘಟಕದ ಅಧ್ಯಕ್ಷೆ ಪಲ್ಲವಿ ಕೊಡಗು ವಹಿಸಿದ್ದರು. ವೇದಿಕೆಯಲ್ಲಿ ತರಬೇತಿ ಸರಣಿಯ ನಿರ್ದೇಶಕ ಬಾಸುಮ ಕೊಡಗು ಹಾಗೂ ಘಟಕದ ಕಾರ್ಯದರ್ಶಿ ಸಮೀಯಾ ಹೆಗ್ಡೆ ಉಪಸ್ಥಿತರಿದ್ದರು.
ಒಂದೇ ದಿನ ಸುಮಾರು 12 ಶಾಲೆಗಳಲ್ಲಿ 60ಕ್ಕೂ ಹೆಚ್ಚು ಜೆಸಿ ತರಬೇತುದಾರರಿಂದ ನೂರ ಹನ್ನೊಂದು ತರಬೇತಿ ನಡೆಸಲಾಯಿತು. ಸುಮಾರು ಮೂರು ಸಾವಿರ ವಿದ್ಯಾರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆದರು.
ಕಾರ್ಯಕ್ರಮಕ್ಕೆ ಘಟಕದ ಎಲ್ಲಾ ಸದಸ್ಯರು ಸಹಕರಿಸಿದ್ದರು.

