ಭಾರೀ ಮಳೆಯ ಹೊಡೆತ : ಮೊಗ್ರುವಿನಲ್ಲಿ ಅಡಿಕೆ, ಬಾಳೆ ಸೇರಿದಂತೆ ವಿವಿಧ ಬೆಳೆಗಳಿಗೆ ಅಪಾರ ಹಾನಿ

0
8

ಮೊಗ್ರು : ಅ 01 ರಂದು ಸುರಿದ ವಿಪರೀತ ಮಳೆಯಿಂದ ನೇತ್ರಾವತಿ ನದಿ ಉಕ್ಕಿ ಹರಿದ ಪರಿಣಾಮ ಮೊಗ್ರು ಗ್ರಾಮದ ಮುಗೇರಡ್ಕ ವ್ಯಾಪ್ತಿಯ ದoಬೆತ್ತಿಮಾರು, ಬರಮೇಲೂ, ಪರಾರಿ, ನೈಮಾರು ಹಾಗೂ ಇನ್ನೂ ಅನೇಕ ಕಡೆಯ ಅಡಿಕೆ, ತೆಂಗು, ಬಾಳೆ, ಕೊಕ್ಕೋ, ಕಾಳುಮೆಣಸು, ತರಕಾರಿ ಕೃಷಿಗೆ ನೀರು ನುಗ್ಗಿ ಜಲಾವೃತಗೊಂಡು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಪೆರಿಯಡ್ಕ ಕುಡುಮಡ್ಕ ಶ್ರೀ ಕುಡುಮಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಅಂಗಣದ ಒಳಗೆ ನೀರು ನುಗಿದ್ದು, ಅಪಾರ ಹಾನಿಯಾಗಿದೆ.