ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ )ಬಂಟ್ವಾಳ ತಾಲೂಕು ಪ್ರಗತಿ ಬಂದು ಸ್ವ -ಸಹಾಯ ಸಂಘಗಳ ಒಕ್ಕೂಟ ಪಾಣೆಮಂಗಳೂರು ವಲಯ ಶಂಬುರು ಒಕ್ಕೂಟದ ಪದಗ್ರಹಣ ಸಮಾರಂಭ ಮತ್ತು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರಿಗೆ ಆಶ್ಲೇಷ ಪೂಜೆ ಸಿಯಾಳ ಅಭಿಷೇಕ ಅಗೋಸ್ಟ್ 2 ಭಾನುವಾರ ನಡೆಯಿತು.
ಒಕ್ಕೂಟ ಪದಗ್ರಹಣ ಸಮಾರಂಭದ ಅಧ್ಯಕ್ಷತೆಯನ್ನು ಕೃಷ್ಣಪ್ಪ ನಾಯ್ಕ್ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀ ನಾಲ್ಕೈತಾ ಯ ಪಂಜುರ್ಲಿ ನೇಮಹೋತ್ಸವ ಸಮಿತಿ ನರಿಕೊಂಬು ಅಧ್ಯಕ್ಷರಾದ ಜಗನ್ನಾಥ್ ಬಂಗೇರ ನಿರ್ಮಲ್ ಮಾಡಿದರು.
ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ದಾಖಲಾತಿ ಜವಾಬ್ದಾರಿಯ ಹಸ್ತಾಂತರವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ ನೆರವೇರಿಸಿದರು.

ಸಮಾರಂಭದ ವೇದಿಕೆಯಲ್ಲಿ ಮೂರ್ತೆದಾರರ ಸಹಕಾರಿ ಸೇವಾ ಸಂಘ ರಿಜಿಸ್ಟರ್ ನರಿಕೊಂಬು ಶಂಬುರು ಅಧ್ಯಕ್ಷ ಪುರುಷೋತ್ತಮ ಸಾಲಿಯನ್, ವ್ಯಾಯಾಮ ಶಾಲೆ ಶಂಬುರು ಅಧ್ಯಕ್ಷರ ಆನಂದ ಎ,ನಿವೃತ್ತ ಮುಖ್ಯ ಶಿಕ್ಷಕಿ ದೇವಕಿ ಟೀಚರ್, ತಾಲೂಕು ಯೋಜನಾಧಿಕಾರಿ ಜಯನಂದ ಪಿ, ಹೇಮಚಂದ್ರ ಶಂಬುರು, ಉದಯ ಇರಂತಬೆಟ್ಟು
ದಿನೇಶ್ ರಾಹುಲಮಜಲ್, ಪುರುಷೋತ್ತಮ ಬಂಗೇರ ನಾಟಿ,ಆನಂದ ಸಾಲಿಯನ್, ನರಿಕೊಂಬು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರ ಸಂತೋಷ್ ಕುಮಾರ್,ಒಕ್ಕೂಟದ ನೂತನ ಅಧ್ಯಕ್ಷ ವಾಮನ್ ಕುಲಾಲ್,ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪಾಣೆಮಂಗಳೂರು ವಲಯ ಮೇಲ್ವಿಚಾರಕಿ ಶಿವಲಕ್ಷ್ಮಿ ಸ್ವಾಗತಿಸಿ, ಒಕ್ಕೂಟದ ಸಾಧನೆಯ ವರದಿ ಸೇವಾ ಪ್ರತಿನಿಧಿ ಲಕ್ಷ್ಮಿ ವಾಚಿಸಿದರು ಸವಿತಾ ವಂದಿಸಿದರು.ಆಂತರಿಕ ಲೆಕ್ಕಪರಿಶೋಧಕರಾದ ಸುಬ್ರಯ್ಯ ನಾಯ್ಕ್ಕಾ ರ್ಯಕ್ರಮದ ನಿರೂಪಿಸಿದರು, ಕಾರ್ಯಕ್ರಮದ ಮೊದಲಿಗೆ ವಿಶೇಷವಾಗಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರಿಗೆ ಸಿಯಾಳ ಅಭಿಷೇಕ ಮತ್ತು ಆಶ್ಲೇಷ ಪೂಜೆಯನ್ನು ಮಾಡಲಾಯಿತು.

