ಅಲಯನ್ಸ್ ಜಿಲ್ಲಾ ಸಂಸ್ಥೆಯಿಂದ ನಾಯಕತ್ವ ತರಬೇತಿ ಕಾರ್ಯಕ್ರಮ

0
9

ಉಡುಪಿ : ಅಸೋಸಿಯೇಷನ್‌ ಓಫ್ ಅಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್, ಅಲಯನ್ಸ್ ಜಿಲ್ಲೆ 275ಎಸ್ ವತಿಯಿಂದ ಜಿಲ್ಲೆಯ ಅಲಯನ್ಸ್ ಕ್ಲಬ್ ಗಳ ಪದಾಧಿಕಾರಿಗಳಿಗೆ ಒಂದು ದಿನದ ನಾಯಕತ್ವ ತರಬೇತಿ ಕಾರ್ಯಕ್ರಮವು ಉಡುಪಿಯ ಮಣಿಪಾಲ್ ಇನ್ ಸಭಾಂಗಣದಲ್ಲಿ ಆ. 2 ರಂದು ನಡೆಯಿತು.

ಕಾರ್ಯಕ್ರಮವನ್ನು ಇಂಟರ್ನ್ಯಾಷನಲ್ ಡೈರೆಕ್ಟರ್ ಡಿ. ಶ್ರೀಧರ್ ಶೇನವ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಅಲಯನ್ಸ್ ಜಿಲ್ಲಾ ಗವರ್ನರ್ ಆಲೈ ಸುನಿಲ್ ಕುಮಾರ್ ಶೆಟ್ಟಿ ಇವರು ಜಿಲ್ಲೆಯ ವಿವಿಧ ಅಲಯನ್ಸ್ ಕ್ಲಬ್ ಗಳಿಂದ ಆಗಮಿಸಿದ ಮೂವತ್ತು ಮಂದಿ ಅಲಯನ್ಸ್ ಪದಾಧಿಕಾರಿಗಳಿಗೆ ನಾಯಕತ್ವದ ಬಗ್ಗೆ ತರಬೇತಿ ನೀಡಿದರು. ಜಿಲ್ಲಾ ಗವರ್ನರ್ ಮಾಹಿತಿ ನೀಡುತ್ತಾ ತರಬೇತಿಯ ಉದ್ದೇಶ, ಕ್ಲಬ್ ಸದಸ್ಯರ ವಿಧಗಳು,ಅಲಯನ್ಸ್ ಸಂಸ್ಥೆಯ ಆಡಳಿತ ವ್ಯವಸ್ಥೆ, ಸದಸ್ಯತ್ವ, ಅಧಿಕಾರ, ಜವಾಬ್ದಾರಿಗಳು ಹಾಗೂ ಪದಾಧಿಕಾರಿಗಳ ಕರ್ತವ್ಯಗಳ ಬಗ್ಗೆ, ಸಮಾಜಸೇವಾ ಚಟುವಟಿಕೆಗಳನ್ನು ನಡೆಸುವ ಕುರಿತು ಮಾಹಿತಿ ನೀಡಿದರು.

ತರಬೇತಿದಾರರಾಗಿ ಎಎಸಿಐ ಲೀಡರ್ಶಿಪ್ ಇನ್ಸ್ಟಿಟ್ಯೂಟ್ ನ ಚೇರ್ಮ್ಯಾನ್ ಸಿ. ಮಹೇಶ್ ಕುಮಾರ್, ಅಲಯನ್ಸ್ ವ್ಯೂ ಮೆಗಜಿನ್ ನ ಚೀಫ್ ಆಡಿಟರ್ ಎಜಿಎ ಶಂಕರ ಸೆಲ್ವರಾಜ್, ಪಾಸ್ಟ್ ಇಂಟರ್ನ್ಯಾಷನಲ್ ಡೈರೆಕ್ಟರ್ ಬೆಳಗಾo ನವೀನ ಶೆಟ್ಟಿಗಾರ್, ಮುಖ್ಯ ಅತಿಥಿಗಳಾಗಿ ಆಗಮಿಸಿದ ಇಂಟರ್ನ್ಯಾಷನಲ್ ಕಮಿಟಿ ಚೇರ್ಮನ್ ಡಾ. ತಲ್ಲೂರು ಶಿವರಾಮ ಶೆಟ್ಟಿ, ಜಿಲ್ಲೆಯ ಅಲಯನ್ಸ್ 275 ಎಸ್ ಇದರ ಐಪಿಡಿಜಿ ಸುನಿಲ್ ಸಾಲಿಯಾನ್ ಉಪಸ್ಥಿತರಿದ್ದರು. ಜಿಲ್ಲೆಯ ಸಂಪುಟ ಕೋಶಾಧಿಕಾರಿ ಎಂ. ಕೃಷ್ಣ ಆಳ್ವ, ಚೀಫ್ ಕಾರ್ಡಿನೇಟರ್ ಗಳಾದ ವಿ. ಎಸ್. ಉಮರ್, ಸುದರ್ಶನ್ ಹೆಗ್ಡೆ, ವಲಯ ಅಧ್ಯಕ್ಷರಾದ ರಮೇಶ್ ಶೆಟ್ಟಿ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಡಿಜಿಟಲ್ ಪರದೆ ಮೂಲಕ ವಿಷಯಗಳನ್ನು ತೋರ್ಪಡಿಸಿ ಸವಿವರ ಮಾಹಿತಿ ನೀಡಿದರು. ಆಗಮಿಸಿದ ಎಲ್ಲಾ ತರಬೇತಿದಾರರಿಗೆ ಪ್ರಮಾಣ ಪತ್ರ ನೀಡಲಾಯಿತು.
ಚೀಟಿಯನ್ನು ಪಿಕ್ ಮಾಡಿ ಬಂದ ವಿಷಯದ ಬಗ್ಗೆ ಮೂವತ್ತು ಮಂದಿಯೂ ಮಾತನಾಡಿದರು. ತರಬೇತಿ ಪಡೆದ ಎಲ್ಲರೂ ಸಮಾರೋಪ ಸಮಾರಂಭದ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಜಿಲ್ಲಾ ಸಂಪುಟದ ಪದಾಧಿಕಾರಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು. ಜಿಲ್ಲಾ ಗವರ್ನರ್ ಸುನಿಲ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರತಾಪ್ ನಿರೂಪಿಸಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ. ರಾಮಚಂದ್ರ ಭಟ್ ವಂದಿಸಿದರು. ಬಿ. ಶ್ರೀನಿವಾಸ್ ರಾವ್ ಸಹಕರಿಸಿದರು.