ಕೆಎಸ್‌ಟಿಎ ಬೆಳ್ತಂಗಡಿ ಕ್ಷೇತ್ರ ಸಮಿತಿಯಿಂದ ಆಟಿದ ಕಮ್ಮೆನ–ಆಟೋಟ ಸ್ಪರ್ಧೆ ಯಶಸ್ವಿ

0
7

ಕೆ ಎಸ್ ಟಿ ಎ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ( ರಿ ನಂ 117-1999-2000) ಕ್ಷೇತ್ರ ಸಮಿತಿ ಬೆಳ್ತಂಗಡಿ ಹಾಗೂ 9 ವಲಯಗಳು ಸೇರಿಕೊಂಡು ಆಟಿದ ಕಮ್ಮೆನ ಮತ್ತು ಆಟೋಟ ಸ್ಪರ್ಧೆ ದಿನಾಂಕ 02-08-2026 ರಂದು ಮಂಜುನಾಥ ಹೋಲಿನ ಬಯಲು ಮಂಟಪದಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ರಾಜು ಪೂಜಾರಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಬೆಳಿಗ್ಗೆ ಆಟೊಟ ಸ್ಪರ್ಧೆಯ ಉದ್ಘಾಟನೆಯನ್ನು ಬೆಳ್ತಂಗಡಿ ಸುದ್ದಿ ಉದಯ ಪತ್ರಿಕೆಯ ಸಂಪಾದಕರಾದ ತುಕಾರಾಂ ಬಿ ಇವರು ನೆರವೇರಿಸಿ ಟೈಲರ್ ವೃತ್ತಿ ಬಾಂಧವರಿಗೆ ಶುಭ ಹಾರೈಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಆಗಮಿಸಿದ ಎಲ್ಲಾ ವೃತ್ತಿಬಾಂಧವರು ಸ್ಪರ್ಧೆಗಳಲ್ಲಿ ಭಾಗವಹಿಸಿದರು ಮಧ್ಯಾಹ್ನ 12:30 ಗಂಟೆಗೆ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ರಾಜು ಪೂಜಾರಿಯವರ ಅಧ್ಯಕ್ಷತೆಯಲ್ಲಿ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೆನ್ಸಿ ಡಿಸೋಜಾ ಪ್ರಾಸ್ತಾವಿಕ ಮಾತನಾಡಿ ಅಸೋಸಿಯೇಷನ್ ಪ್ರಾರಂಭ ಹಾಗೂ ಸಂಘಟನೆಯ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.

ಕಿರಣ್ ಚಂದ್ರ ಪುಷ್ಪಗಿರಿಯವರು ದೀಪ ಪ್ರಜ್ವಲನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಟೈಲರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಯೊಬ್ಬರೂ ಅವರ ರೂಪ ಚಂದ ಕಾಣಬೇಕಾದರೆ ನಾವು ತೊಡುವ ಬಟ್ಟೆ ಅದರ ವಿನ್ಯಾಸ ಯಾವುದೇ ರೀತಿಯಲ್ಲಿ ಮಾಡಿಕೊಡುವ ಟೈಲರ್ಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾ ಎಲ್ಲರೂ ಜಾತಿ ಭೇದ ಮರೆತು ನಾವೆಲ್ಲರೂ ಒಂದೇ ಕುಟುಂಬ ಎಂಬಂತೆ ಒಗ್ಗೂಡಿದ್ದೀರಿ , ಹೀಗೇನೇ ನಿಮ್ಮ ಒಬ್ಬಟ್ಟು ಕಾರ್ಯವೈಕರಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.

ನಿವೃತ್ತ ರಾ, ಹೆ, ಮುಖ್ಯ ಅತಿಯಂತರರು ಮಂಗಳೂರು ಶಿವಪ್ರಸಾದ್ ಅಜಿಲ ರವರನ್ನು ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು . ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಟೈಲರ್ ವೃತ್ತಿ ಬಾಂಧವರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು , ಪ್ರಗತಿಪರ ಕೃಷಿಕರಾದ ಗಂಗಾಧರ ಮಿತ್ತಮಾರು ಮಾತನಾಡಿ ಎಲ್ಲಾ ಟೈಲರ್ ವೃತ್ತಿಬಾಂಧವರಿಗೆ ಶುಭ ಹಾರೈಸಿದರು, ಟೈಲರ್ ಸಹಕಾರ ಸಂಘದ ಅಧ್ಯಕ್ಷರು ಮಾಜಿ ಕ್ಷೇತ್ರ ಸಮಿತಿಯ ಅಧ್ಯಕ್ಷರು ಆದ ವಲೇರಿಯನ್ ರೊಡ್ರೀಗಸ್ ಮಾತನಾಡಿ ಟೈಲರ್ ಅಸೋಸಿಯೇಷನ್ ನಿನ್ನ ಪ್ರಾರಂಭದ ದಿನಗಳನ್ನು ನೆನಪಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುರಳಿಧರ ಭಟ್ ನೋಟರಿ ವಕೀಲರು ಬೆಳ್ತಂಗಡಿ ಇವರು ಮಾತನಾಡಿ ಯೋಧರು ಗಡಿಯಲ್ಲಿ ಹೇಗೆ ದೇಶ ಕಾಯುತ್ತಾರೋ ಹಾಗೇನೆ ನಮ್ಮ ಮಾನ ಕಾಪಾಡುವ ಯೋಧರು ಟೈಲರ್ಗಳು ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಮೋಹನ್ ಸ್ವರ್ಣ ಆಡಳಿತ ಪಾಲುದಾರರು ಮಾತೃಶ್ರೀ ಸಿಲ್ಕ್ ಬೆಳ್ತಂಗಡಿ ಇವರು ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು, ಸಭೆಯಲ್ಲಿ 9 ವಲಯದ ಹಿರಿಯ ಟೈಲರ್ ರವರನ್ನು ಗೌರವಿಸಲಾಯಿತು.

ಆಟೋಟ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು, ವೇದಿಕೆಯಲ್ಲಿ ರಾಜ್ಯ ಸಮಿತಿಯ ಕಾರ್ಯದರ್ಶಿಯಾದ ಪ್ರಜ್ವಲ್ ಕುಮಾರ್ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಜಯಂತ್ ಉರ್ಲಾಂಡಿ ಜಿಲ್ಲಾ ಉಪಾಧ್ಯಕ್ಷರಾದ ವೇದಾವತಿ ಜನಾರ್ಧನ್ ಕ್ಷೇತ್ರದ ಕೋಶಾಧಿಕಾರಿ ಶಶಿಕಲಾ ಗೋಪಾಲ್ ಉಪಾಧ್ಯಕ್ಷರು ವಸಂತ ಸ್ವಾತಿ ಟೈಲರ್ ಹಾಗೂ 9 ವಲಯದ ಅಧ್ಯಕ್ಷರುಗಳು ಆಸೀನರಾಗಿದ್ದರು .

ಮುಖ್ಯ ಆಮಂತ್ರಿ ತರಾದ ಜಿಲ್ಲಾ ಸಮಿತಿಯ ಸದಸ್ಯರು ಕುಶಾಲಪ್ಪ ಗೌಡ ಶಾಂಭವಿ ಪಿ ಬಂಗೇರ ರವೀಂದ್ರ ಗೇರುಗಟ್ಟೆ ನಾಗೇಶ್ ಕುಮಾರ್ ಕ್ಷೇತ್ರದ ಪದಾಧಿಕಾರಿಗಳು ವಲಯದ ಪದಾಧಿಕಾರಿಗಳು ಆಮಂತ್ರಿಸಿದ ನಮ್ಮ ಆತ್ಮೀಯರು ಉಪಸ್ಥಿತರಿದ್ದರು ಹರಿಣಿ ಕೆಂಬರ್ಜೆ ಪ್ರಾರ್ಥನೆ ನೆರವೇರಿಸಿದರು ಸದಾನಂದ ಸಾಲ್ಯಾನ್ ಸ್ವಾಗತಿಸಿದರು.

ಕಾರ್ಯಕ್ರಮ ನಿರೂಪಣೆ ಆಕಾಶ್ ಗೇರುಗಟ್ಟೆ ಶಾಂಭವಿ ಪಿ ಬಂಗೇರರವರು ಧನ್ಯವಾದವಿತ್ತರು ಆಟಿಯ ತಿಂಡಿ ತಿನಿಸುಗಳ ಊಟ ಸವಿದು ಬಳಿಕ ಉಳಿದ ಸ್ಪರ್ಧೆಗಳನ್ನು ಮುಂದುವರಿಸಿ ಹಗ್ಗ ಜಗ್ಗಾಟ ಸ್ಪರ್ಧೆ ಯೊಂದಿಗೆ ಸಾಯಂಕಾಲ 5:00 ಗಂಟೆಗೆ ಕಾರ್ಯಕ್ರಮ ಮುಕ್ತಾಯವಾಯಿತು.