ಲಯನ್ಸ್ ಕ್ಲಬ್ ಆಫ್ ಮಂಗಳೂರು ಸೋಮೇಶ್ವರದ ‘ಸೋಮೇಶ್ವರ ದರ್ಪಣ’ ಚಾರ್ಟರ್ ಕ್ಲಬ್ ಡೈರೆಕ್ಟರಿ ಹಾಗೂ ಮಾಸಪತ್ರಿಕೆಯನ್ನು ಕಾರ್ಗಿಲ್ ವಿಜಯ್ ದಿವಸ್ ಹಾಗೂ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಂಗವಾಗಿ ಬೀರಿಯ ವಾಣಿ ಸಭಾಂಗಣದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು.
ಕಾರ್ಗಿಲ್ ಯುದ್ಧದ ವೀರಯೋಧ, ಪರಮವೀರ ಚಕ್ರ ಪುರಸ್ಕೃತ ಸುಬೇದಾರ್ ಮೇಜರ್ (ಗೌರವ ಕ್ಯಾಪ್ಟನ್) ಯೋಗೇಂದ್ರ ಸಿಂಗ್ ಯಾದವ್ ಅವರು ಈ ಡೈರೆಕ್ಟರಿ ಮತ್ತು ಮಾಸಪತ್ರಿಕೆಯನ್ನು ಬಿಡುಗಡೆ ಮಾಡಿ, ಲಯನ್ಸ್ ಕ್ಲಬ್ ನಡೆಸುತ್ತಿರುವ ಸಮಾಜಮುಖಿ ಸೇವಾ ಕಾರ್ಯಗಳು, ರಾಷ್ಟ್ರಭಕ್ತಿ ಹಾಗೂ ಯುವಜನರಿಗೆ ನೀಡುತ್ತಿರುವ ಪ್ರೇರಣೆಯನ್ನು ಶ್ಲಾಘಿಸಿದರು.
ಈ ಡೈರೆಕ್ಟರಿಯಲ್ಲಿ ಕ್ಲಬ್‌ನ ಸ್ಥಾಪನೆಯಿಂದ ಇಲ್ಲಿಯವರೆಗೆ ನಡೆದ ಸೇವಾ ಚಟುವಟಿಕೆಗಳು, ಸದಸ್ಯರ ವಿವರಗಳು, ಪದಾಧಿಕಾರಿಗಳ ಮಾಹಿತಿ, ವಿವಿಧ ಸಮಾಜಮುಖಿ ಯೋಜನೆಗಳು ಹಾಗೂ ಭವಿಷ್ಯದ ಕಾರ್ಯಯೋಜನೆಗಳು ಒಳಗೊಂಡಿದೆ. ಮಾಸಪತ್ರಿಕೆಯಲ್ಲಿ ಲೇಖನಗಳು, ಛಾಯಾಚಿತ್ರಗಳು ಮತ್ತು ಕ್ಲಬ್‌ನ ಪ್ರಮುಖ ಸಾಧನೆಗಳನ್ನು ಪ್ರಕಟಿಸಲಾಗಿದೆ.
ಚಾರ್ಟರ್ ಅಧ್ಯಕ್ಷ ಲಯನ್ ವಿಜಯನ್ ಕೆ. ಅವರು ಮಾತನಾಡಿ, ‘ಸೋಮೇಶ್ವರ ದರ್ಪಣ’ ಕ್ಲಬ್‌ನ ಸೇವಾ ಪಯಣವನ್ನು ದಾಖಲಿಸುವ ಐತಿಹಾಸಿಕ ದಾಖಲೆಯಾಗಿ ಉಳಿಯಲಿದ್ದು, ಸದಸ್ಯರಿಗೆ ಮತ್ತಷ್ಟು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಲು ಪ್ರೇರಣೆ ನೀಡಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಾರ್ಟರ್ ಕಾರ್ಯದರ್ಶಿ ಲಯನ್ ಕೆ. ಗೋಪಿನಾಥ್, ಚಾರ್ಟರ್ ಖಜಾಂಚಿ ಲಯನ್ ನಿತೀಶ್ ಕೃಷ್ಣ, ವಿವಿಧ ಗಣ್ಯರು, ಮಾಜಿ ಸೈನಿಕರು, ಲಯನ್ಸ್ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಪರಮವೀರ ಚಕ್ರ ಪುರಸ್ಕೃತ ಯೋಗೇಂದ್ರ ಸಿಂಗ್ ಯಾದವ್ ಅವರಿಂದ ‘ಸೋಮೇಶ್ವರ ದರ್ಪಣ’ ಬಿಡುಗಡೆಗೊಂಡಿರುವುದು ಲಯನ್ಸ್ ಕ್ಲಬ್ ಆಫ್ ಮಂಗಳೂರು ಸೋಮೇಶ್ವರದ ಇತಿಹಾಸದಲ್ಲಿ ಸ್ಮರಣೀಯ ಮೈಲುಗಲ್ಲಾಗಿ ದಾಖಲಾಗಿದೆ.

