
ಬ್ರಹ್ಮಾವರ : ಬ್ಲಾಕ್ ಮಹಿಳಾ ಕಾಂಗ್ರೇಸ್ಸ್ ವತಿಯಿಂದ ಆಷಾಡ ಸಂಭ್ರಮ ಕಾರ್ಯಕ್ರಮವು ಬ್ಲಾಕ್ ಕಛೇರಿಯಲ್ಲಿ ಜರಗಿತು. ಬ್ರಹ್ಮಾವರ ಮಹಿಳಾ ಬ್ಲಾಕ್ ಅಧ್ಯಕ್ಷರಾದ ಅನಿತಾ ಬಾಬು ಪೂಜಾರಿ ಹಾಗೂ ಎಲ್ಲಾ ಸದಸ್ಯರ ಸಂಯೋಜನೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಕಾಂಗ್ರೆಸ್ಸ್ ಮುಖಂಡರಾದ ಪ್ರಸಾದ ರಾಜ್ ಕಾಂಚನ ಅವರು ದ್ವೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಜಿಲ್ಲಾ ಮಹಿಳಾ ಅಧ್ಯಕ್ಷರಾದ ಜ್ಯೋತಿ ಹೆಬ್ಬಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದರು. ಶಿಕ್ಷಕಿ .ಸಾಹಿತಿ.ಲೇಖಕಿ ವಸಂತಿ ಅಂಬಲಪಾಡಿ ಅವರು ಆಷಾಡದ ಮಹತ್ವದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನು ಆಡಿದರು
ಜಿಲ್ಲಾ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಆಷಾಡದ ಕಷ್ಟದ ದಿನಗಳ ಬಗ್ಗೆ ತಿಳಿಸಿದರು.
ಸಮಾರಂಭದಲ್ಲಿ ಸಹಕಾರ ರತ್ನ ರಮೇಶ್ ಶೆಟ್ಟಿ ಉಪ್ಪೂರು,ಉಡುಪಿ ಮಹಿಳಾ ಬ್ಲಾಕ್ ಅಧ್ಯಕ್ಷರಾದ ಮಮತಾ ಶೆಟ್ಟಿ,ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಭುಜಂಗ ಶೆಟ್ಟಿ, ಬ್ಲಾಕ್ ಉಸ್ತುವಾರಿ ಯಾದ ಪ್ರಖ್ಯಾತ ಶೆಟ್ಟಿ , ಕೆ.ಪಿ.ಸಿ.ಸಿ ಸದಸ್ಯರಾದ ಶ್ರೀಮತಿ ಗೀತಾ ವಾಗ್ಲೆ, ಅನಿತಾ ಡಿಸಿಲ್ವ,ಡಾ.ಸುನೀತಾ ಶೆಟ್ಟಿ,ಉಡುಪಿ ಬ್ಲಾಕ್ ಅಧ್ಯಕ್ಷರಾದ ರಮೇಶ್ ಕಾಂಚನ್, ಸಾಮಾಜಿಕ ಜಾಲ ತಾಣದ ರೋಶನ್ ಶೆಟ್ಟಿ, ಹಾಗೂ ಎಲ್ಲಾ ಬ್ಲಾಕ್ ಅಧ್ಯಕ್ಷರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೋಪಿ ನಾಯ್ಕ್ ನಿರೂಪಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ಥಿ ಪುರಸ್ಕತರಾದ ಉಮೇಶ ಪೂಜಾರಿ ಧನ್ಯವಾದ ಹೇಳಿದರು.
