ಡೊಂಬಿವಿಲಿ : ಆ.17ರಂದು ಶ್ರೀ ಜಗದಂಬಾ ಮಂದಿರದಲ್ಲಿ ನಾಗರ ಪಂಚಮಿ ಮಹೋತ್ಸವ

0
35

ಡೊಂಬಿವಿಲಿ : ಶ್ರೀ ಜಗದಂಬಾ ಮಂದಿರ, ಡೊಂಬಿವಿಲಿಯಲ್ಲಿ 2026ರ ಆಗಸ್ಟ್ 17, ಸೋಮವಾರ ಪವಿತ್ರ ನಾಗರ ಪಂಚಮಿ ಮಹೋತ್ಸವವು ನಡೆಯಲಿದೆ.

ಯಕ್ಷ ಕಲಾ ಸಂಸ್ಥೆ (ರಿ.) ಸ್ಥಾಪಿತ ಹಾಗೂ ಶ್ರೀ ಜಗದಂಬಾ ಚಾರಿಟೇಬಲ್ ಟ್ರಸ್ಟ್ (ರಿ.) ಸಂಯೋಜಿತ ಈ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಜಗದಂಬೆ, ಮಹಾಗಣಪತಿ, ನವಗ್ರಹ ಹಾಗೂ ನಾಗದೇವರ ದಿವ್ಯ ಆಶೀರ್ವಾದ ಪಡೆಯುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

ಬೆಳಿಗ್ಗೆ 7.00 ಗಂಟೆಗೆ ನಿತ್ಯ ಪೂಜೆ ನಡೆಯಲಿದ್ದು, 8.30 ಗಂಟೆಯಿಂದ ನಾಗ ತನು ಅಭಿಷೇಕ, 11.00 ಗಂಟೆಗೆ ಆಶ್ಲೇಷ ಬಲಿ, ಮಧ್ಯಾಹ್ನ 12.00ಕ್ಕೆ ಮಹಾ ಮಂಗಳಾರತಿ ಹಾಗೂ 12.30ಕ್ಕೆ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

ನಾಗ ತನು ಅಭಿಷೇಕ ಹಾಗೂ ಆಶ್ಲೇಷ ಬಲಿ ಸೇವೆ ಸಲ್ಲಿಸಲು ಬಯಸುವ ಭಕ್ತರು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಜಗದೀಶ್ ಭಟ್ (ಮೊ. 76193 97125) ಹಾಗೂ ಕೋಶಾಧಿಕಾರಿ (ಮೊ. 90046 62484) ಅವರನ್ನು ಸಂಪರ್ಕಿಸಬಹುದಾಗಿದೆ.

ಭಕ್ತರ ಅನುಕೂಲಕ್ಕಾಗಿ ಪೂಜೆಗೆ ಅಗತ್ಯವಾದ ಎಳನೀರು (ಸೀಯಾಳ) ಹಾಗೂ ಹಾಲಿನ ವ್ಯವಸ್ಥೆಯನ್ನು ದೇವಸ್ಥಾನದಲ್ಲಿಯೇ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ದೇವಸ್ಥಾನದ ಗೌರವಾಧ್ಯಕ್ಷರು, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಸಮಸ್ತ ಸದಸ್ಯರು ಭಕ್ತರನ್ನು ಕುಟುಂಬ ಸಮೇತರಾಗಿ ಆಗಮಿಸಿ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಆತ್ಮೀಯ ಆಹ್ವಾನ ನೀಡಿದ್ದಾರೆ.