ಸಂಗೀತ ಲೋಕದ ಅಮರ ಧ್ರುವತಾರೆ ಗಾನಸರಸ್ವತಿ ಎಸ್. ಜಾನಕಿ

0
5

ಸಂಗೀತವೇ ಪ್ರಧಾನವಾದ ಭಾರತ ದೇಶದಲ್ಲಿ ಎಸ್ ಜಾನಕಿ ಒಬ್ಬ ಹೆಸರಾಂತ ವಿಶ್ವ ವಿಖ್ಯಾತಿ ಹಿನ್ನೆಲೆ ಗಾಯಕಿ, ಹಲವಾರು ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿ ಕೋಟ್ಯಾಂತರ ಸಂಗೀತ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಮಾಸದೆ ಉಳಿದಿರುವ ದಿಗ್ಗಜ ಗಾಯಕಿ ( ಐegeಟಿಜಚಿಡಿಥಿ Siಟಿgeಡಿ ), ಎಸ್ ಜಾನಕಿ ಅವರು ಚಿಕ್ಕ ವಯಸ್ಸಿನಿಂದಲೇ ಯಾವುದೇ ಶಾಸ್ತ್ರೀಯ ಸಂಗೀತದ ತರಬೇತಿ ಇಲ್ಲದೆ ದೈವ ದತ್ತವಾದ ದೇವರ ಕೊಡುಗೆ ಅವರದಾಗಿತ್ತು ಅವರು ತಮ್ಮ ಜೀವನವನ್ನೇ ಸಂಗೀತ ಕ್ಷೇತ್ರಕ್ಕೆ ಮುಡುಪಾಗಿಟ್ಟ ” ಹೋಲಿಕೆ ಇಲ್ಲದ ಗಾಯಕಿ” ಯಾಗಿ ಬೆಳೆದು ಸಾಧನೆಯ ಶಿಖರ ಎರಿದ್ದಾರೆ.

ಭಾರತೀಯ ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ತಮ್ಮ ಅದ್ಭುತ ಕಂಠಸಿರಿಯ ಮೂಲಕ ಅಜರಾಮರ ಸ್ಥಾನವನ್ನು ಅಲಂಕರಿಸಿದ ಮಹಾನ್ ಗಾಯಕಿ ಎಸ್. ಜಾನಕಿ ಅವರು ಸಂಗೀತ ಲೋಕದ ಅಪರೂಪದ ದಂತಕಥೆ. ಅವರ ಕಂಠದಿAದ ಮೂಡಿಬಂದ ಪ್ರತಿಯೊಂದು ಹಾಡು ಸಂಗೀತಪ್ರಿಯರ ಹೃದಯವನ್ನು ಸ್ಪರ್ಶಿಸಿ, ತಲೆಮಾರುಗಳನ್ನು ಮೀರಿ ಇಂದಿಗೂ ಅದೇ ಮಧುರತೆಯಿಂದ ಮೊಳಗುತ್ತಿದೆ.

ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದಲ್ಲಿ ನಿರಂತರವಾಗಿ ಗಾಯನ ಸೇವೆ ಸಲ್ಲಿಸಿರುವ ಎಸ್. ಜಾನಕಿ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಒರಿಯಾ, ತುಳು ಸೇರಿದಂತೆ 17 ಹಲವು ಭಾಷೆಗಳಲ್ಲಿ 48,000 ಗೀತೆಗಳನ್ನು ಹಾಡಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅದರಲ್ಲಿ ಕನ್ನಡ ಭಾಷೆಯಲ್ಲಿಯೇ ಅತಿ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.

ಅವರ ಕಂಠದಲ್ಲಿ ಮೂಡಿಬರುವ ಭಕ್ತಿ, ಪ್ರೀತಿ, ವಿರಹ, ತಾಯಿಯ ಮಮತೆ, ಹಾಸ್ಯ, ಉತ್ಸಾಹ ಹಾಗೂ ಜೀವನದ ಅವರ ಅದ್ಭುತ ಧ್ವನಿಯ ಏರಿಳಿತ (voiಛಿe moಜuಟಚಿಣioಟಿ) ತೆಳ್ಳಗಿನ ಧ್ವನಿ, ಎತ್ತರದ ಧ್ವನಿಯಲ್ಲಿ ಕಂದನ ಹುಡುಗನ ಧ್ವನಿ, ಪ್ರೇಮದ ಪ್ರೀತಿಯ ಧ್ವನಿ ಗಳು ಹೀಗೆ ವಿವಿಧ ಭಾವನೆಗಳು ಕೇಳುಗರ ಮನಸ್ಸನ್ನು ಆಳವಾಗಿ ತಟ್ಟಿ ಹೃದಯ ಸ್ಪರ್ಷವಾಗುವಂತಿವೆ ಇವರ ಗೀತೆಗಳಿಗೆ ಮನಸೋಲದ ಜನರೇ ಇಲ್ಲ, ಎಷ್ಟೊ ಚಲನಚಿತ್ರ ಹೆಸರಾಂತ ನಟಿಯರ ಅಭಿನಯಕ್ಕೆ ಜೀವ ತುಂಬಿದ್ದಾರೆ. ಅತ್ಯಂತ ವಿಶೇಷವೆಂದರೆ, ಭಾರತೀಯ ಸಂಗೀತ ಲೋಕದ ಶ್ರೇಷ್ಠ ಪುರುಷ ಗಾಯಕರಾದ ಘಂಟಸಾಲ, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಜೆ. ಯೇಸುದಾಸ್, ಪಿ. ಬಿ. ಶ್ರೀನಿವಾಸ್, ಮನೋ, ಟಿ. ಎಂ. ಸೌಂದರರಾಜನ್, ಮಲೇಷಿಯಾ ವಾಸುದೇವನ್, ಹರಿಹರನ್, ಉದಿತ್ ನಾರಾಯಣ್, ಉನ್ನಿಕೃಷ್ಣನ್ ಸೇರಿದಂತೆ ಅನೇಕ ಪ್ರಸಿದ್ಧ ಗಾಯಕರೊಂದಿಗೆ ಅವರು ಹಾಡಿದ ಗೀತೆಗಳು ಭಾರತೀಯ ಸಂಗೀತದ ಅಮೂಲ್ಯ ಸಂಪತ್ತಾಗಿ ಉಳಿದಿವೆ. ಈ ಜೋಡಿಗಳಿಂದ ಮೂಡಿಬಂದ ಅನೇಕ ಗೀತೆಗಳು ಇಂದಿಗೂ ಸಂಗೀತಾಸಕ್ತರ ಹೃದಯಗಳಲ್ಲಿ ಚಿರಸ್ಥಾಯಿಯಾಗಿ ನೆಲೆಗೊಂಡಿವೆ.

ಇಳಯರಾಜ, ಹಂಸಲೇಖ, ರಾಜನ್–ನಾಗೇಂದ್ರ, ಎಂ. ಎಸ್. ವಿಶ್ವನಾಥನ್, ವಿಜಯಭಾಸ್ಕರ್, ಉಪೇಂದ್ರ ಕುಮಾರ್, ಚಕ್ರವರ್ತಿ, ಎ. ಆರ್. ರೆಹಮಾನ್ ಸೇರಿದಂತೆ ಅನೇಕ ದಿಗ್ಗಜ ಸಂಗೀತ ನಿರ್ದೇಶಕರ ಸಂಗೀತ ನಿರ್ದೇಶನದಲ್ಲಿ ಅವರು ಹಾಡಿದ ಹಾಡುಗಳು ಭಾರತೀಯ ಚಿತ್ರಸಂಗೀತಕ್ಕೆ ಹೊಸ ರೂಪವನ್ನೇ ನೀಡಿವೆ.
ಎಸ್ ಜಾನಕಿ ಅವರ ಅದ್ವಿತೀಯ ಗಾಯನಕ್ಕೆ ಭಾರತ ಸರ್ಕಾರ ಪದ್ಮಭೂಷಣ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರೂ ಸಹ ಅದನ್ನು ಕಾರಣಾಂತರದಿಂದ ತಿರಸ್ಕರಿಸಿದ ಅಪರೂಪದ ಗಾಯಕಿ.

ಜೊತೆಗೆ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ಅನೇಕ ರಾಜ್ಯ ಪ್ರಶಸ್ತಿಗಳು ಹಾಗೂ ಜೀವಮಾನ ಸಾಧನೆ ಗೌರವಗಳು ಅವರನ್ನು ಅಲಂಕರಿಸಿವೆ. ಆದರೆ ಅವರಿಗೆ ದೊರೆತ ಅತ್ಯಂತ ದೊಡ್ಡ ಪ್ರಶಸ್ತಿ ಎಂದರೆ ಕೋಟ್ಯಂತರ ಸಂಗೀತಾಭಿಮಾನಿಗಳ ಪ್ರೀತಿ, ಗೌರವ ಮತ್ತು ಅಚಲ ಅಭಿಮಾನ.
ಎಷ್ಟೇ ಯಶಸ್ಸು ಪ್ರಶಸ್ತಿಗಳು ಮತ್ತು ಜನಪ್ರಿಯತೆ ಗಳಿಸಿದ್ದರು ಪ್ರಚಾರವನ್ನು ಎಂದಿಗೂ ಬಯಸದ ಸರಳ ಸೌಮ್ಯ ವ್ಯಕ್ತಿತ್ವದವರಾಗಿದ್ದರು ಎಸ್ ಜಾನಕಿ ತಮ್ಮ ಮಧುರ ಕಂಠದಿAದ ಕೋಟ್ಯಾಂತರ ಹೃದಯಗಳನ್ನು ಗೆದ್ದರೂ ಸಹ ಇವರ ವಯಕ್ತಿಕ ಜೀವನದ ಅಂತ್ಯಮ ದಿನಗಳಲ್ಲಿ ಒಂಟಿತನದ ದುಃಖದ ಛಾಯೆ ಆವರಿಸಿತ್ತು ಎಂಬುದು ಸಂಗೀತ ಲೋಕಕ್ಕೆ ಅತ್ಯಂತ ವಿಷಾದದ ಸಂಗತಿ.

ಎಸ್. ಜಾನಕಿ ಅವರು ಕೇವಲ ಗಾಯಕಿಯಲ್ಲ; ಅವರು ಒಂದು ಸಂಗೀತ ವಿಶ್ವವಿದ್ಯಾಲಯ, ಒಂದು ಭಾವಲೋಕ, ಒಂದು ಸಾಂಸ್ಕೃತಿಕ ಪರಂಪರೆ. ಅವರ ಗಾಯನವು ಭಾರತೀಯ ಸಂಗೀತದ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಿದ ಅಮೂಲ್ಯ ಕೊಡುಗೆಯಾಗಿದೆ. ಅವರ ಕಂಠದಿAದ ಹೊರಹೊಮ್ಮಿದ ಪ್ರತಿಯೊಂದು ಸ್ವರವೂ ಸಂಗೀತದ ಪಾವಿತ್ರ‍್ಯವನ್ನು ಸಾರುವ ದಿವ್ಯನಾದವಾಗಿದೆ.

“ಸ್ವರವೇ ಅವರ ಉಸಿರು, ಸಂಗೀತವೇ ಅವರ ಜೀವನ, ಭಾವವೇ ಅವರ ಗುರುತು. ಗಾನಸರಸ್ವತಿ ಎಸ್. ಜಾನಕಿ ಅವರ ಅಮರ ಕಂಠಸಿರಿ ಭಾರತೀಯ ಸಂಗೀತ ಲೋಕಕ್ಕೆ ದೇವರು ನೀಡಿದ ಅಪರೂಪದ ವರವಾಗಿದೆ. ಸೂರ್ಯ-ಚಂದ್ರರು ಇರುವವರೆಗೂ ಅವರ ಹೆಸರು, ಅವರ ಹಾಡುಗಳು ಮತ್ತು ಅವರ ಕೀರ್ತಿ ಸಂಗೀತ ಪ್ರಪಂಚದಲ್ಲಿ ಚಿರಸ್ಥಾಯಿಯಾಗಿ ಬೆಳಗುತ್ತಲೇ ಇರುತ್ತವೆ. ಅವರು ಹಾಡಿದ ಪ್ರತಿಯೊಂದು ಗೀತೆ ಭಾರತೀಯ ಸಂಗೀತದ ಅಮೂಲ್ಯ ರತ್ನವಾಗಿ ಎಂದೆAದಿಗೂ ಉಳಿದಿವೆ. ಅವರ ಅತ್ಮಕ್ಕೆ ಚಿರಶಾಂತಿ ದಯಪಾಲಿಸಿಲಿ ಎಂದು ಹಾರೈಸೋಣ.

ಹೆಚ್.ವಿ.ಮಂಜುನಾಥ ಸ್ವಾಮಿ