ಕಾರ್ಕಳ: ಕಾರ್ಕಳ ಮಾರಿಯಮ್ಮ ದೇವಸ್ಥಾನದ ಬಳಿ ಶ್ರೀವಿಜಯ ದ ಎರಡನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಆಶಯ ವಿವಿಧೋದ್ದೇಶ ಸಂಹಾರದ ಸಹಕಾರಿ ಸಂಘದ 12ನೇ ಮಹಾಸಭೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಆಗಸ್ಟ್ 7 ರಂದು ನಡೆಯಿತು.
ಅಧ್ಯಕ್ಷ ಸುವ್ರತ್ ಕುಮಾರ್ ಎಂ ಕೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರೋಬರ್ಟ ರೊನಾಲ್ಡ ಫೆರ್ನಾಂಡಿಸ್ ಸ್ವಾಗತಿಸಿದರು. 300 ಕೋಟಿ ವಾರ್ಷಿಕ ವ್ಯವಹಾರವನ್ನು ನಡೆಸಿ, 100 ಶೇಕಡ ಸಾಲ ಮರುಪಾವತಿಯನ್ನು ಹೊಂದಿ, ಸತತ 12 ವರ್ಷಗಳಿಂದ 16 ಶೇಕಡ ಡಿವಿಡೆಂಡ್ ನೀಡುತ್ತಿರುವ ಸಂಘದ ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿ ಶೇಖರ್ ರಾವ್ ಓದಿದರು.
ನಿರ್ದೇಶಕ ಮೋಹನ್ ಪಡಿವಾಳ್, ಸಿ ಎ ಉಮೇಶ್ ರಾವ್ ಹಾಜರಿದ್ದರು. ನಿರ್ದೇಶಕರುಗಳಾದ ನಿರಂಜನ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಡೆನ್ನಿಸ್ ಪಿರೇರಾ ನೋಟೀಸು ಓದಿ ದಾಖಲಿಸಿದರು. ಲಾಜರಸ್ ಡಿಕೋಸ್ಟಾ ಲೆಕ್ಕಪತ್ರ ಮಂಡಿಸಿದರು. ಇತರ ನಿರ್ದೇಶಕರುಗಳಾದ ಎಂಕೆ ದಿವಿಜೇಂದ್ರ ಕುಮಾರ್, ಪ್ರಭಾತ್ ಎನ್, ಹೆನ್ಸಿಲ್ ರೀನಾ ನವಿತಾ ಡಿಸೋಜಾ, ಪಾರ್ಶ್ವನಾಥ ಎಸ್ ವರ್ಮ, ಸರಿತಾ ಅನಿತಾ ಪಾಯಸ್, ಡಾ ಕೃಷ್ಣ ಡಿಎಸ್, ವಿಶ್ವನಾಥ ನಾಯ್ಕ ಹಾಗೂ ಸಿಬ್ಬಂದಿಗಳು, ಸದಸ್ಯರುಗಳು ಹಾಜರಿದ್ದರು.
ಕಾರ್ಕಳ ಶಾಖಾ ಮುಖ್ಯಸ್ಥ ರಾಜಾರಾಮ್ ಹೆಗ್ಡೆ, ಮೂಡುಬಿದಿರೆಯ ಅನಿಲ್ ಕುಮಾರ್, ಸುಶ್ಮಿತಾ, ಕಾರ್ಯಕ್ರಮವನ್ನು ಸಂಘಟಿಸಿದ್ದರು.
.

