ಬಹ್ರೇನ್: ಬಹ್ರೇನ್ ಬಿಲ್ಲವಾಸ್ ವತಿಯಿಂದ ಶ್ರೀ ನಾರಾಯಣಗುರು ಸಭಾಭವನದಲ್ಲಿ ಶುಕ್ರವಾರ ನಡೆದ “ತಿಂಗೊಲ್ಡ್ ಭಜನೆ” ಕಾರ್ಯಕ್ರಮವು ಹಿರಿಯ ಸದಸ್ಯರ ಉಪಸ್ಥಿತಿ ಹಾಗೂ ಸದಸ್ಯರ ಸಕ್ರಿಯ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಭಜನಾ ತಂಡವನ್ನು ಕಾರ್ಯಕಾರಿ ಸಮಿತಿಯು ಅಭಿನಂದಿಸಿ, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿತು.
ಬಳಿಕ ಹಿರಿಯ ಸದಸ್ಯರ ಸಮ್ಮುಖದಲ್ಲಿ ಸೆಪ್ಟೆಂಬರ್ 14, 2026 (ಸೋಮವಾರ) ಕನ್ನಡ ಸಂಘದಲ್ಲಿ ನಡೆಯಲಿರುವ ಶ್ರೀ ಗಣೇಶ ಚತುರ್ಥಿ ಆಚರಣೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಮುಂಬರುವ ಗಣೇಶ ಚತುರ್ಥಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಸರ್ವಧರ್ಮದವರು ಹಾಗೂ ಎಲ್ಲಾ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಬಹ್ರೇನ್ ಬಿಲ್ಲವಾಸ್ ಕಾರ್ಯಕಾರಿ ಸಮಿತಿಯು ಮನವಿ ಮಾಡಿದೆ.

