ಮಂಗಳೂರು ಬಲ್ಮಠದಲ್ಲಿ ಅಗಸ್ಟ್ ಹತ್ತರಂದು ತ್ರಿಷಾ ದಿನ ಆಚರಣೆ

0
5

ಉನ್ನತ ಶಿಕ್ಷಣ ಮತ್ತು ಶೈಕ್ಷಣಿಕ ಶ್ರೇಷ್ಠತೆಯಲ್ಲಿ 28 ವರ್ಷಗಳ ಸಮರ್ಪಿತ ಸೇವೆಯನ್ನು ತ್ರಿಶಾ ಶಿಕ್ಷಣ ಸಂಸ್ಥೆ ತ್ರಿಶಾ ದಿನವನ್ನಾಗಿ ಆಚರಿಸಲಿದೆ. ಅಗಸ್ಟ್ ಹತ್ತರಂದು ಮಂಗಳೂರು ಬಲ್ಮಠದ ಡಾನ್ ಬೋಸ್ಕೋ ಹಾಲ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಶಿಕ್ಷಣ, ವೈದ್ಯಕೀಯ, ನೃತ್ಯ, ನಾಟಕ, ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡಗೆ ನೀಡಿದವರಿಗೆ ಸನ್ಮಾನ ನಡೆಯಲಿದೆ.

ಈ ಸಂದರ್ಭ ಸಂಸ್ಥೆಯ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್, ಬೋಧಕ ವರ್ಗ, ವಿದ್ಯಾರ್ಥಿಗಳು, ಹಿತೈಷಿಗಳು ಉಪಸ್ಥಿತರಿರುವರು ಎಂದು ಪ್ರಾಂಶುಪಾಲ ಮಂಜುನಾಥ ಕಾಮತ್, ಅಕಾಡೆಮಿಕ್ ಸಲಹೆಗಾರರು, ಸಂಜೆ ಕಾಲೇಜು ಪ್ರಾಂಶುಪಾಲೆ ಸುಪ್ರಭಾ, ಪ್ರಭಾಕರ, ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವರದಿ ರಾಯಿ ರಾಜ ಕುಮಾರ್