ಆ.9 ಮಂಗಳೂರಿನಲ್ಲಿ ವಿಶ್ವ ಕುಂದಾಪ್ರ ದಿನಾಚರಣೆ

0
4

“ಮಾತಾಡೋಣ ಕುಂದಾಪ್ರ ಕನ್ನಡ, ಉಳಿಸೋಣ ಕುಂದಗನ್ನಡ” ಪ್ರಕಾರದಂತೆ ಭಾಷೆ, ಆಚಾರ ವಿಚಾರ, ರೂಢಿ, ಸಂಪ್ರದಾಯ, ಉಡುಗೆ ತೊಡೆಗೆ, ಸಂಸ್ಕಾರ, ಸಂಸ್ಕೃತಿ ವಿಭಿನ್ನತೆಯ ನಡುವೆಯೂ ಬಾಂಧವ್ಯವನ್ನು ಗಟ್ಟಿಗೊಳಿಸುವ ಕುಂದಾಪ್ರ ಕನ್ನಡ ನಮ್ಮ ಹೆಮ್ಮೆ. ಆ ಪ್ರಕಾರ ಅಗಸ್ಟ್ 9 ರಂದು ಇಡೀ ದಿನ ಮಂಗಳೂರು ಉರುವ ಸ್ಟೋರ್ ನ ಬಿ ಆರ್ ಅಂಬೇಡ್ಕರ್ ಭವನದಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಕುಡ್ಲದಾಗಿಪ್ಪ ಕುಂದಾಪ್ರದರ್ ಗಳನ್ನು ಒಂದುಗೂಡಿಸುವ ಕಾರ್ಯಕ್ರಮ ನಡೆಯಲಿದೆ.

ಇದೇ ಸಂದರ್ಭ ಉಚಿತ ರಕ್ತ ತಪಾಸಣಾ ಶಿಬಿರ ಡಾ ಮಂಜುನಾಥ ಎಸ್ಎಂ ರಿಂದ, ಉಚಿತ ಆರೋಗ್ಯ ತಪಾಸಣಾ ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡಾ ಅವಿನ್ ಆಳ್ವ ಕೊಳ್ಕೆಬೈಲು ರಿಂದ ನಡೆಯಲಿದೆ. ಸದಸ್ಯರಿಗೆ ಗ್ರಾಮೀಣ ವಿವಿಧ ಕ್ರೀಡಾಕೂಟ ಇರುವುದು. ಸಂಜೆ ಸಭಾ ಕಾರ್ಯಕ್ರಮ ದಲ್ಲಿ ಸಾಧಕರಾದ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ, ಸುಜನ್ ಶೆಟ್ಟಿ ಸನ್ಮಾನ. ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಮಾಲತಿ ಶೆಟ್ಟಿ, ಕಾರ್ಯದರ್ಶಿ ಶರತ್ ಆಚಾರ್ಯ, ಕೋಶಾಧಿಕಾರಿ ನವೀನ್ ಶೆಟ್ಟಿ, ಸಂಚಾಲಕ ಸಂತೋಷ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವರದಿ ರಾಯಿ ರಾಜ ಕುಮಾರ್
.