ದಶಮಾನೋತ್ಸವ ಸಂಭ್ರಮದಲ್ಲಿ ಮರೋಳಿ ಅಮೃತಾ ಯಕ್ಷ ಮಿತ್ರ ಬಳಗ

0
7

ಹವ್ಯಾಸದಿಂದ 2015ರಲ್ಲಿ ಆರಂಭಗೊಂಡ ಅಮೃತಾ ಯಕ್ಷ ಮಿತ್ರ ಸಂಸ್ಥೆ ಅಮೃತಾ ಕಾಲೇಜಿನ ಪ್ರಾಂಶುಪಾಲರ ಒತ್ತಾಸೆಯಿಂದ ಯಕ್ಷ ಮಿತ್ರ ಬಳಗ ಸಂಸ್ಥೆ ಹುಟ್ಟಿ ತದನಂತರ ಬಲ್ಮಠ ಶಾಲಾ ಮಕ್ಕಳಿಗೆ ಯಕ್ಷ ತರಬೇತಿ ನೀಡುವ ಮೂಲಕ ಮುಂದುವರೆಯುತ್ತಿದೆ. ಮಹಾಪೋಷಕ ವೆಂಕಟೇಶ್ ಐತಾಳ್ 10 ವರ್ಷದಿಂದ ತರಬೇತಿ, ತಾಳಮದ್ದಳೆ ಆಯೋಜಿಸಿ ಆರು ವರ್ಷದ ಮಕ್ಕಳಿಂದ 50 ವರ್ಷದವರೆಗಿನ ಮಹಿಳೆಯರವರೆಗಿನ 20ಕ್ಕೂ ಅಧಿಕ ಸದಸ್ಯರು ಬಳಗದಲ್ಲಿದ್ದಾರೆ.

ಈ ದಶಾವರುಷದ ನೆನಪನ್ನು ಅರ್ಥಪೂರ್ಣವಾಗಿ ಆಚರಿಸಲು ಆಗಸ್ಟ್ 15ರಂದು ನಿರಂತರ ಇಡೀ ದಿನ ವಿವಿಧ ಯಕ್ಷ ಕಾರ್ಯಕ್ರಮ ಮರೋಳಿ ಸೂರ್ಯನಾರಾಯಣ ದೇವಾಲಯದಲ್ಲಿ ನಡೆಯಲಿದೆ ಎಂದು ಶೋಭಾ ಐತಾಳ್ ತಿಳಿಸಿದರು.

ಇದೇ ಸಂದರ್ಭ ಯಕ್ಷ ಗುರು ಬಿ ಎಂ ಅಶೋಕ್ ಬೋಳೂರು ಅವರಿಗೆ ಗುರು ನಮನ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವೇದಿಕೆಯಲ್ಲಿ ಅಶೋಕ್ ಬೋಳೂರು, ಕದ್ರಿ ನವನೀತ್ ಶೆಟ್ಟಿ, ಶಿವ ಪ್ರಸಾದ್ ಪ್ರಭು ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್