ನೊಂದವರ ದನಿಯಾದ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡಿದೆ. ಅಂತಹ ಅಂಬೇಡ್ಕರ ತತ್ವ, ಸಿದ್ಧಾಂತ, ಆಶಯಗಳನ್ನು ಅಳವಡಿಸಿಕೊಂಡ ಎಂ ದೇವದಾಸ್ ಅವರು ಉಭಯ ಜಿಲ್ಲೆಗಳ ಸಂಘಟನೆಯ ಮುಖ್ಯ ಕಾರಣಕರ್ತರು.
ವಿವಿಧ ಇಲಾಖೆಗಳನ್ನು ಎಚ್ಚರಿಸಿ ಹೋರಾಟ ರೂಪಿಸಿ ನ್ಯಾಯ ಕೊಡಿಸಿದ ಜನಾನುರಾಗಿ ದೇವದಾಸ್ ಎಂ ಅವರ ನುಡಿ ನಮನ ಕಾರ್ಯಕ್ರಮ ಮಂಗಳೂರಿನ ಊರ್ವ ಸ್ಟೋರ್ ಅಂಗಡಿಗುಡ್ಡದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಆಗಸ್ಟ್ ಹತ್ತರಂದು ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರಿ, ಸರೋಜಿನಿ ಬಂಟ್ವಾಳ, ಕೃಷ್ಣಾನಂದ ಡಿ, ರಘು ಎಕ್ಕಾರು ತಿಳಿಸಿದರು.
ವರದಿ ರಾಯಿ ರಾಜ ಕುಮಾರ್

