ಉಡುಪಿ : ಸನಾತನ ಧರ್ಮದ ಪರಂಪರೆಯನ್ನು ಪಾಲಿಸುವುದರಿಂದ ಸಂಸತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯ. ಗ್ರಾಮೀಣ ಕ್ರೀಡಾಕೂಟಗಳು ಆರೋಗ್ಯಯುತ ಸಮಾಜದ ನಿಮಾರ್ಣಕ್ಕೆ ದಾರಿದೀಪವಾಗುತ್ತದೆ ಎಂದು ಉದ್ಯಮಿ ಶ್ರೀನಿವಾಸ್ ಜೋಗಿ ನೀಡಿದರು.
ಬಳೆಗಾರಬೆಟ್ಟಿನಲ್ಲಿ ಭಾನುವಾರ ಜೋಗಿ ಸಮಾಜ ಸೇವಾ ಸಮಿತಿ, ನಾಥಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ , ಜೋಗಿ ಸಮಾಜ ವಿವಿಧೋದ್ದೇಶ ಸಹಕಾರ ಸಂಘದ ಆಶ್ರಯದಲ್ಲಿ ಜೋಗಿ ಸಮಾಜದ ಬಾಂಧವರಿಗಾಗಿ ಆಯೋಜಿಸಲಾದ ‘ಕೆಸರಲ್ಲಿ ಒಂದು ದಿನ’ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಮಾಜದ ಮುಖಂಡ ದೇವರಾಜ ಜೋಗಿ ಮಾತನಾಡಿ, “ಆಷಾಢ ಮಾಸದ ವಿಶೇಷತೆ ಹಾಗೂ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬ ನಾಗರಿಕನೂ ತಿಳಿದುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಳ್ಳಿ ಸಮಾಜ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಗಿ ವಹಿಸಿದ್ದರು. ಮುರಳೀಧರ ಜೋಗಿ ಉದ್ಘಾಟಿಸಿದರು.
ಹಲವರಿ ಮಠ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸ ಜೋಗಿ ಕಂಡ್ಲೂರು, ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಅಧ್ಯಕ್ಷ ದೇವರಾಜ ಕೆ. ಬಳೆಗಾರ ಬೈಂದೂರು, ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಸಂಸ್ಥೆಯ ಸ್ಥಾಪಕ ಅಧ್ಯಕ್ಷ ನವೀನ್ ಚಂದ್ರ ಜೋಗಿ, ಗೌರವಾಧ್ಯಕ್ಷ ಹರಿಶ್ಚಂದ್ರ ಜೋಗಿ, ಜೋಗಿ ಸಮಾಜ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಸಂತ ಜೋಗಿ ಎರ್ಮಳ್, ಕಾರ್ಯದರ್ಶಿ ಅಶೋಕ್ ಜೋಗಿ ಕಾರ್ಕಳ,
ನಾಥಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ ಅಧ್ಯಕ್ಷೆ ಅನುಪಮ ಜೋಗಿ, ಗೌರವಾಧ್ಯಕ್ಷೆ ರಜನಿ ಜೋಗಿ, ಕಾರ್ಯದರ್ಶಿ ಯೋಗಿಣಿ ಜೋಗಿ, ರಾಜ್ಯ ಸಮಿತಿ ಉಪಾಧ್ಯಕ್ಷ ರವಿ ಜೋಗಿ ಕೋಟ, ನಿರ್ದೇಶಕರಾದ ಗೋಪಾಲಕೃಷ್ಣ ಜೋಗಿ ಕಾಪು ಉಪಸ್ಥಿತರಿದ್ದರು.

