ಪರಿಸರ ಜಾಗೃತಿಗೆ ಕೆನರಾ ಬ್ಯಾಂಕ್ ಕೊಡುಗೆ ಶ್ಲಾಘನೀಯ: ಯಶ್ಪಾಲ್ ಸುವರ್ಣ

0
30

ಉಡುಪಿ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜನ್ಮತಾಳಿ ದೇಶಾದ್ಯಂತ ಆರ್ಥಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಕೆನರಾ ಬ್ಯಾಂಕ್​ ಜನರಲ್ಲಿ ಪರಿಸರ ಜಾಗೃತಿಯ ಕೆಲಸ ಮಾಡುತ್ತಿರುವುದು ಶ್ಲಾನೀಯ ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.

ಭಾನುವಾರ ಮಣಿಪಾಲದ ಕೆನರಾ ಬ್ಯಾಂಕ್​ ವೃತ್ತ ಕಚೇರಿಯಲ್ಲಿ ಆಯೋಜಿಸಿದ್ದ ಕೆನರಾ ಬ್ಯಾಂಕ್​ 5ನೇ ಆವೃತ್ತಿಯ ಫ್ರೀಡಂ ರನ್​ ಮ್ಯಾರಥಾನ್​ ಓಟ ಉದ್ಘಾಟಿಸಿ ಮಾತನಾಡಿದರು.

ಕೆನರಾ ಬ್ಯಾಂಕ್​ ಆರ್ಥಿಕ ಚಟುವಟಿಕೆ ಮಾತ್ರವಲ್ಲದೆ ಜಿಲ್ಲೆಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಪರಿಸರ ಸಂರಕ್ಷಣೆ ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು 5ನೇ ವರ್ಷದ ಮ್ಯಾರಥಾನ್​ ಹಮ್ಮಿಕೊಂಡಿದೆ ಎಂದು ಹೇಳಿದರು.

ಜಿಪಂ ಸಿಇಒ ಪ್ರತಿಕ್​ ಬಾಯಲ್​, ಎಡಿಸಿ ಅಬೀದ್​ ಗದ್ಯಾಳ್​, ಮಾಹೆ ಸಹಕುಲಾಧಿಪತಿ ಡಾ. ಎಚ್​. ಎಸ್​. ಬಲ್ಲಾಳ್​, ಜಿಲ್ಲಾ ಅಥ್ಲೆಟಿಕ್​ ಆಸೋಸಿಯೇಶನ್​ ಅಧ್ಯಕ್ಷ ಹರಿಪ್ರಸಾದ್​ ರೈ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್​ ಕುಮಾರ್​ ಶೆಟ್ಟಿ, ಸಂತೋಷ್​ ಶೆಟ್ಟಿ, ಶ್ರೀವತ್ಸ ಬಲ್ಲಾಳ್​, ಶರತ್​ ಆಳ್ವಾ, ಡಾ. ಬಾಲಕೃಷ್ಣ ಮದ್ದೋಡಿ, ಇಪಿಎ್​ ಆಯುಕ್ತ ಶಶಿಕಾಂತ್​ ದಹಿಯಾ, ರವೀಂದ್ರ ಶೇಟ್​, ಡಾ. ವಿನೋದ್​ ನಾಯಕ್​, ಬ್ಯಾಂಕಿನ ಜನರಲ್​ ಮ್ಯಾನೇಜರ್​ ಎಚ್​.ಕೆ. ಗಂಗಾಧರ್​, ಜಿಎಂ ಕನಿಮೋಳಿ, ಸೀನಿಯರ್​ ಮ್ಯಾನೇಜರ್​ ಸಚಿನ್​ ಶೆಟ್ಟಿ . ಬ್ಯಾಂಕಿನ ಮ್ಯಾನೇಜರ್​ ದುರ್ಗಾಪ್ರಸಾದ್​, ಸೂರಜ್​ ಉಳ್ಳೂರು, ಸಿದ್ದಾರ್ಥ್​ ಸೂಡ್​ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 21ಕಿ.ಮೀ., 10ಕಿ.ಮೀ., 5ಕಿ.ಮೀ., 3ಕಿ.ಮೀ. ಹಾಗೂ ಫನ್​ ರನ್​ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.