ಉಡುಪಿ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜನ್ಮತಾಳಿ ದೇಶಾದ್ಯಂತ ಆರ್ಥಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಕೆನರಾ ಬ್ಯಾಂಕ್ ಜನರಲ್ಲಿ ಪರಿಸರ ಜಾಗೃತಿಯ ಕೆಲಸ ಮಾಡುತ್ತಿರುವುದು ಶ್ಲಾನೀಯ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಭಾನುವಾರ ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಚೇರಿಯಲ್ಲಿ ಆಯೋಜಿಸಿದ್ದ ಕೆನರಾ ಬ್ಯಾಂಕ್ 5ನೇ ಆವೃತ್ತಿಯ ಫ್ರೀಡಂ ರನ್ ಮ್ಯಾರಥಾನ್ ಓಟ ಉದ್ಘಾಟಿಸಿ ಮಾತನಾಡಿದರು.

ಕೆನರಾ ಬ್ಯಾಂಕ್ ಆರ್ಥಿಕ ಚಟುವಟಿಕೆ ಮಾತ್ರವಲ್ಲದೆ ಜಿಲ್ಲೆಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಪರಿಸರ ಸಂರಕ್ಷಣೆ ಹಾಗೂ ಆರೋಗ್ಯಕರ ಜೀವನಶೈಲಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು 5ನೇ ವರ್ಷದ ಮ್ಯಾರಥಾನ್ ಹಮ್ಮಿಕೊಂಡಿದೆ ಎಂದು ಹೇಳಿದರು.
ಜಿಪಂ ಸಿಇಒ ಪ್ರತಿಕ್ ಬಾಯಲ್, ಎಡಿಸಿ ಅಬೀದ್ ಗದ್ಯಾಳ್, ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಜಿಲ್ಲಾ ಅಥ್ಲೆಟಿಕ್ ಆಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ, ಸಂತೋಷ್ ಶೆಟ್ಟಿ, ಶ್ರೀವತ್ಸ ಬಲ್ಲಾಳ್, ಶರತ್ ಆಳ್ವಾ, ಡಾ. ಬಾಲಕೃಷ್ಣ ಮದ್ದೋಡಿ, ಇಪಿಎ್ ಆಯುಕ್ತ ಶಶಿಕಾಂತ್ ದಹಿಯಾ, ರವೀಂದ್ರ ಶೇಟ್, ಡಾ. ವಿನೋದ್ ನಾಯಕ್, ಬ್ಯಾಂಕಿನ ಜನರಲ್ ಮ್ಯಾನೇಜರ್ ಎಚ್.ಕೆ. ಗಂಗಾಧರ್, ಜಿಎಂ ಕನಿಮೋಳಿ, ಸೀನಿಯರ್ ಮ್ಯಾನೇಜರ್ ಸಚಿನ್ ಶೆಟ್ಟಿ . ಬ್ಯಾಂಕಿನ ಮ್ಯಾನೇಜರ್ ದುರ್ಗಾಪ್ರಸಾದ್, ಸೂರಜ್ ಉಳ್ಳೂರು, ಸಿದ್ದಾರ್ಥ್ ಸೂಡ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 21ಕಿ.ಮೀ., 10ಕಿ.ಮೀ., 5ಕಿ.ಮೀ., 3ಕಿ.ಮೀ. ಹಾಗೂ ಫನ್ ರನ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.

