ಗುಲ್ವಾಡಿ ಸೇವಾ ಸಹಕಾರಿ ಸಂಘ ನಿಯಮಿತ ಗುಲ್ವಾಡಿ : ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ

0
15

ಗುಲ್ವಾಡಿ ಸೇವಾ ಸಹಕಾರಿ ಸಂಘ ನಿಯಮಿತ ಗುಲ್ವಾಡಿ ಇದರ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸರ್ವೋದಯ ಅನುಧಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ ಸೌಕೂರು ಮಾತನಾಡಿ ಸಂಘವು ಲಾಭಾಂಶದಲ್ಲಿ ವ್ಯವಹರಿಸುತ್ತಿದ್ದು ವರದಿ ವರ್ಷದಲ್ಲಿ ಸ್ವಂತ ಜಾಗವನ್ನು ಖರೀದಿ ಮಾಡಿದ್ದು ಮುಂದಿನ ದಿನದಲ್ಲಿ ಕಟ್ಟಡ ನಿರ್ಮಾಣ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.

ಉಪಾಧ್ಯಕ್ಷರಾದ ಸುರೇಶ್ ಆರ್ ನಾಯ್ಕ ಆನಗಳ್ಳಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಿದರು ನಿರ್ದೇಶಕರು ಸಹಕಾರ ನೀಡಿದರು.

ಸಂಘದ ಪ್ರಧಾನ ವ್ಯವಸ್ಥಾಪಕ ಪ್ರದೀಪ ಪೂಜಾರಿ ಗುಲ್ವಾಡಿ ಲೆಕ್ಕ ಪತ್ರ ಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಪೂರ್ಣಿಮಾ ಪೂಜಾರಿ ಬಳ್ಕೂರು ರೇಣುಕಾಚಾರ್ಯ ಕೋಣಿ, ಸೀತಾ ಕಂದಾವರ, ಜಿ ಡಿ ಪಂಜು ಪೂಜಾರಿ ಗುಲ್ವಾಡಿ, ರವೀಂದ್ರ ಶೆಟ್ಟಿ ಸೌಕೂರು, ಚಂದ್ರ ಶೇಖರ ಶೇರಿಗಾರ್ ಸೌಕೂರು, ಮಂಜುನಾಥ ಶೇಟ್ ಕೋಣಿ, ಕುಪ್ಪ ಸೌಕೂರು, ಜಿ ಸಲೀಂ ಗುಲ್ವಾಡಿ, ಗಣೇಶ್ ಶೇರಿಗಾರ್ ಬಳ್ಕೂರು, ಹಾಗೂ ಆಶಾ ಪೂಜಾರಿ ಮತ್ತು ನಾಗೇಶ್ ಮಾವಿನಕಟ್ಟೆ ಆಶಿಕ್ ಮುಂತಾದವರು ಉಪಸ್ಥಿತರಿದ್ದರು. ಆಶಾ ಪೂಜಾರಿ ಸ್ವಾಗತಿಸಿ, ನಾಗೇಶ್ ಮಾವಿನಕಟ್ಟೆ ಧನ್ಯವಾದ ತಿಳಿಸಿದರು.