ಜೋಡುರಸ್ತೆಯಲ್ಲಿ ಆ.14ರಂದು ಎನ್‌ಪಿ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ಸ್ ಶುಭಾರಂಭ

0
45

ಕಾರ್ಕಳ : ಜೋಡುರಸ್ತೆಯ ಸಹಕಾರ ಸಿಂಧೂರ ಕಾಂಪ್ಲೆಕ್ಸ್‌ನ ಕೆಳ ಮಹಡಿ ಮತ್ತು ಎರಡನೇ ಮಹಡಿಯಲ್ಲಿ ಎನ್‌ಪಿ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ಸ್ ಮಳಿಗೆಯು ಆ.14ರಂದು ಶುಭಾರಂಭಗೊಳ್ಳಲಿದೆ ಎಂದು ಎನ್‌ಪಿ ಸಮೂಹ ಸಂಸ್ಥೆಯ ವಾಸುದೇವ ಭಟ್ ತಿಳಿಸಿದ್ದಾರೆ.

ಆ.11ರಂದು ಕಾರ್ಕಳದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎನ್. ಪಿ ಗ್ರೂಪ್‌ನ ವತಿಯಿಂದ ಇದು ೧೩ನೇ ಉದ್ಯಮ ಎಂದು ಅವರು ತಿಳಿಸಿದರು.

ಗ್ರಾಹಕರ ಅನುಕೂಲತೆಗೆ ತಕ್ಕ ಹಾಗೆ ಒಂದೇ ಸೂರಿನಡಿ ಎಲ್ಲಾ ಗೃಹೋಪ ಯೋಗಿ ಉತ್ಪನ್ನಗಳು ಲಭ್ಯವಿದ್ದು, ಉದ್ಘಾಟನೆಯ ಪ್ರಯುಕ್ತ ಗ್ರಾಹಕರು ಖರೀದಿಸುವ ಉತ್ಪನ್ನಗಳ ಮೇಲೆ ವಿಶೇಷ ಆಫರ್ ನೀಡಲಾಗುವುದು. ಈ ಆಫರ್‌ಗಳು ಆ.೧೪ರಿಂದ ಆ. ೨೫ರವರೆಗೆ ನಡೆಯಲಿದೆ ಎಂದರು.

ರಾಜಾಪುರ ಸಾರಸ್ವತ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಮಾತನಾಡಿ, ಜೋಡುರಸ್ತೆ ನಮ್ಮ ಕಟ್ಟಡಲ್ಲಿ ಹೋಸ ಹೊಸ ಉದ್ಯಮಗಳು ಆರಂಭಗೊಳ್ಳು ತ್ತಿದೆ. ಇದರಿಂದ ಗ್ರಾಹಕರಿಗೂ ಅನು ಕೂಲವಾಗುತ್ತಿದೆ. ಕಾರ್ಕಳ ಭಾಗದಲ್ಲಿ ಉತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ಸ್‌ನ ಉದ್ಯಮವನ್ನು ವಾಸುದೇವ್ ಭಟ್ ಆರಂಭಿಸಿರುವುದು ಜನರಿಗೆ ಅನುಕೂಲವಾಗಲಿದೆ ಎಂದರು.

ಫೆಡರೇಷನ್ ಆಫ್ ಕರ್ನಾಟಕ ರಾಜ್ಯ ಕ್ವಾರಿ ಆಂಡ್ ಕ್ರಶರ್ಸ್ ಓನರ್‍ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ಎನ್‌ಪಿ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ಸ್ ಜನತೆಗೆ ಉತ್ತಮ ಸೇವೆ ನೀಡಿ ಗ್ರಾಹಕರ ಪ್ರಶಂಸೆಗೆ ಪಾತ್ರವಾಗಲಿ ಎಂದರು. ಅವಿನಾಶ್ ಶೆಟ್ಟಿ, ಎನ್‌ಪಿ ಗೂಪ್‌ನ ಸಿಬ್ಬಂದಿ ಸೌಮ್ಯ ಶೆಟ್ಟಿ ಉಪಸ್ಥಿತರಿದ್ದರು.