ಮಂಗಳೂರು : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ, ದುಬಾಯಿ ಇದರ 2025-26ನೇ ಸಾಲಿನ ವಿಶೇಷ ‘ಯಕ್ಷ ಶ್ರೀರಕ್ಷಾ’ ಗೌರವ ಪ್ರಶಸ್ತಿಯನ್ನು ಖ್ಯಾತ ಯಕ್ಷಗಾನ ಹಾಗೂ ರಂಗಕಲಾವಿದ ವಾಸು ಬಾಯಾರು ಅವರಿಗೆ ಪ್ರದಾನ ಮಾಡಲಾಯಿತು.
ಮಂಗಳೂರಿನ ಶ್ರೀ ಮಂಗಳಾದೇವಿ ದೇವಾಲಯದ ಆವರಣದಲ್ಲಿ ನಡೆದ ಯಕ್ಷಗಾನ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಯಕ್ಷಗಾನ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ವಾಸು ಬಾಯಾರು ಅವರು ನೀಡಿರುವ ಕೊಡುಗೆ, ಕಲಾ ಸೇವೆ ಮತ್ತು ನಿರಂತರ ಪರಿಶ್ರಮವನ್ನು ಗುರುತಿಸಿ ಈ ಗೌರವವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದ ಪ್ರಮುಖರು, ಕಲಾಭಿಮಾನಿಗಳು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದು, ವಾಸು ಬಾಯಾರು ಅವರನ್ನು ಅಭಿನಂದಿಸಿದರು.

