ಪುತ್ತಿಗೆ ಶ್ರೀಪಾದರ ನವಿಮುಂಬೈ ಪ್ರವೇಶಕ್ಕೆ ಅದ್ದೂರಿ ಸ್ವಾಗತ

0
22

ನವಿ ಮುಂಬಯಿ : ಉಡುಪಿಯ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಪುತ್ತಿಗೆ ಮಠದ ಪೀಠಾಧಿಪತಿ, ಶ್ರೀ ಡಾ. ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಚತುರ್ಥ ‘ವಿಶ್ವ ಗೀತಾ ಪರ್ಯಾಯ’ ಪೂಜಾ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ ಬಳಿಕ, ತಮ್ಮ 53ನೇ ಚಾತುರ್ಮಾಸ್ಯ ವ್ರತ ದೀಕ್ಷೆಯನ್ನು ನವಿ ಮುಂಬೈನ ವಾಶಿಯಲ್ಲಿರುವ ನೂತನ ಶಾಖಾ ಮಠದಲ್ಲಿ ಆಚರಿಸಲಿದ್ದು. ಆಗಸ್ಟ್ 11,ರ ಮಂಗಳವಾರದಂದು ನವಿಮುಂಬೈಯಲ್ಲಿ ಶ್ರೀಗಳ ‘ಪುರಪ್ರವೇಶ’ ಕಾರ್ಯಕ್ರಮವು ಬಹಳ ಅದ್ದೂರಿಯಿಂದ ಜರಗಿತ್ತು.

ನವಿ ಮುಂಬಯಿಯ ವಾಶಿ ಸೆಕ್ಟರ್-29ರಲ್ಲಿರುವ ಶ್ರೀ ಗುರುವಾಂಯೂರಪ್ಪನ್ ದೇವಾಲಯದಿಂದ ಭವ್ಯ ಮೆರವಣಿಗೆಯೊಂದಿಗೆ ಶ್ರೀಗಳ ಪುರಪ್ರವೇಶ ಹಾಗೂ ಸೆಕ್ಟರ್-12 ನೂತನವಾಗಿ ಪ್ರಾರಂಭಗೊಂಡ ಉಡುಪಿ ಶ್ರೀ ಪುತ್ತಿಗೆ ಮಠಕ್ಕೆ ಶ್ರೀಗಳನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಕರೆತರಲಾಯಿತು.

ಈ ಸಂದರ್ಭದಲ್ಲಿ ಜರಿ ಮೇರಿ ದಿನೇಶ್ ಕೋಟ್ಯಾನ್ ಬಳಗ ಮೆರವಣಿಗೆ ಉದ್ದಕ್ಕೂ ವಿವಿಧ ವೇಷಭೂಷಣಗಳು ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವೇಷಗಳು,ಯಕ್ಷಗಾನ ಚೆಂಡೆ, ವಾದ್ಯ ಘೋಷಗಳೊಂದಿಗೆ ಮೆರವಣಿಗೆಗೆ ವಿಶೇಷ ಮೆರಗನ್ನು ನೀಡಲಾಗುತ್ತಿತ್ತು. ಶ್ರೀ ಮೂಕಾಂಬಿಕ ದೇವಸ್ಥಾನ ಮಹಿಳಾ ತಂಡದ ಸದಸ್ಯರಿಂದ ಭಜನೆ, ಭಕ್ತರಿಂದ ಕುಣಿತ ಭಜನೆ ಹಾಗೂ ಪರಿಸರದ ತುಳು ಕನ್ನಡಿಗರು ಸಂಘಗಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಾಜಕೀಯ ಮುಖಂಡರು ಸಾಮಾಜಿಕ ಮುಖಂಡರು ವಿವಿಧ ಜಾತೀಯ ಸಂಸ್ಥೆಗಳ ಪ್ರಮುಖರು ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಆಗಸ್ಟ್ 12ರಿಂದ ಸೆಪ್ಟೆಂಬರ್ 26, 2026ರವರೆಗೆ 53ನೇ ಚಾತುರ್ಮಾಸ್ಯ ವ್ರತ ದೀಕ್ಷಾ ಸ್ವೀಕರಿಸಿದರು. ‘ಸಪ್ಟಂಬರ್ ತಿಂಗಳಲ್ಲಿ ಸಹಸ್ರ ಕಂಠ ಗೀತಾ ಪಾರಾಯಣ’ ಹಾಗೂ ಕೋಟಿ ಗೀತಾ ಲೇಖನ ಯಜ್ಞ ಕಾರ್ಯಕ್ರಮಗಳಿಗೆ ಸ್ವಾಮೀಜಿಯವರು ಚಾಲನೆ ನೀಡಲಿರುವರು.

ಚಾತುರ್ಮಾಸ್ಯ ವ್ರತ ಸಮಿತಿ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮುಂಬಯಿಯ ಹೆಸರಾಂತ ಉದ್ಯಮಿ ಶಿವರಾಮ ಜಿ ಶೆಟ್ಟಿ ಅಜೆಕಾರು,ಕಾರ್ಯಧ್ಯಕ್ಷರುದ ನೀರು ಶ್ರೀ ಬಾಲಾಜಿ ಮಂದಿರದ ಕಾರ್ಯಾಧ್ಯಕ್ಷ ಉದ್ಯಮಿ ಸಮಾಜಸೇವಕ . ಗೋಪಾಲ ವೈ ಶೆಟ್ಟಿ ಕಳತ್ತೂರು, ಗೌರವಾಧ್ಯಕ್ಷರು ಎನ್. ಆರ್. ರಾವ್ ಡಾ. ಸುರೇಶ್ ರಾವ್, ಉಪಾಧ್ಯಕ್ಷ ವಾಮನ ಹೊಳ್ಳ ಚಂಬೂರು , ಮೂಕಾಂಬಿಕಾ ದೇವಸ್ಥಾನ ಧರ್ಮದರ್ಶಿ ಅಣ್ಣಿ ಶೆಟ್ಟಿ, ಉದ್ಯಮಿ, ಬಿ. ಆರ್. ಶೆಟ್ಟಿ, ಉದ್ಯಮಿ ಸಮಾಜಸೇವಕ,ಕಾರ್ಯದರ್ಶಿ ದಿನೇಶ್ ಕುಲಾಲ್ , ಸಹ ಕಾರ್ಯದರ್ಶಿಗಳು ವಿದ್ವಾನ್ ರಾಘವೇಂದ್ರ ಜಮದಗ್ನಿ. ವಿದ್ವಾನ್ ನಾಗೇಂದ್ರ ಆಚಾರ್ಯ ಕುರ್ಲಾ , ವಿದ್ವಾನ್ ಗುರುಪ್ರಸಾದ್ ಘನ್ಸೋಲಿ, ಖಜಾಂಚಿ: ಉದ್ಯಮಿ ಸಂತೋಷ್ ಸಿ. ಶೆಟ್ಟಿ, ಸಹ ಖಜಾಂಚಿ: ಗುರುಪ್ರಸಾದ್ ಚೆಂಬೂರು, ಸಂಚಾಲಕರು ಸುಧೀರ್ ಆರ್. ಎಲ್. ಶೆಟ್ಟಿ ಹಾಗೂ ಇತರ ಸಮಿತಿ ಸದಸ್ಯರು ಶ್ರೀಗಳ 53ನೇ ಚಾತುರ್ಮಾಸ್ಯ ವ್ರತ ದೀಕ್ಷಾ ಮಹೋತ್ಸವ ಅತ್ಯಂತ ಅದ್ದೂರಿಯಿಂದ ನಡೆಸಲು ಸಂಪೂರ್ಣ ಸಹಕಾರ ಸಹಕರಿಸಿದರು.

ಸ್ವಾಮೀಜಿಯ ಮುಂಬಯಿ ಮಹಾನಗರ ಹಾಗೂ ದೇಶ-ವಿದೇಶಗಳ ಭಕ್ತಾದಿಗಳು, ಸದ್ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ, ಪಾರಾಯಣ, ಪ್ರವಚನಗಳಲ್ಲಿ ಪಾಲ್ಗೊಂಡು ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಸುಮಾರು 750 ವರ್ಷಗಳ ಗುರುಪರಂಪರೆಯಿಂದ ಪೂಜಿಸಲ್ಪಡುತ್ತಿರುವ ಶ್ರೀ ವಿಠಲದೇವರ ಪೂರ್ಣಾನುಗ್ರಹ ಹಾಗೂ ಪ್ರಸಾದ ಸ್ವೀಕರಿಸಿ ಚಾತುರ್ಮಾಸ್ಯ ವ್ರತ ದೀಕ್ಷೆ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

ವರದಿ : ದಿನೇಶ್ ಕುಲಾಲ್