ದಾವಣಗೆರೆ : ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಇತ್ತೀಚಿಗೆ ಕುವೆಂಪು ಕನ್ನಡ ಭವನದಲ್ಲಿ ನಡೆದ ನಾಗಮ್ಮ ಕೇಶವಮೂರ್ತಿ ವೇದಿಕೆಯಲ್ಲಿ 2 ದಿನಗಳ ಕಾಲ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ನಡೆದ ಈ ಸಾಂಸ್ಕೃತಿಕ, ಸಾಹಿತ್ಯ, ಗಾಯನ, ಭರತನಾಟ್ಯ, ನಾಟಕ, ಕೋಲಾಟ, ಜಾನಪದ ಸಂಸ್ಕೃತಿ ಸಮಾರಂಭದಲ್ಲಿ ಹಿರಿಯ ಸಾಹಿತಿ, ಕವಯತ್ರಿ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಮಿತಿ ಸದಸ್ಯರಾದ ಮಂಜುಳಾ ಸುನೀಲ್‌ರವರ “ಚಿತ್ತ ಭಿತ್ತಿಯ ಚಿತ್ತಾರ” ಕವನ ಸಂಕಲನವನ್ನು ಸಮ್ಮೇಳನದ ಸರ್ವಾಧ್ಯಕ್ಷರಾದ ರಾಜಯೋಗಿನಿ ಬ್ರಹ್ಮಕುಮಾರಿ ಲೀಲಾಜಿಯವರು ಲೋಕಾರ್ಪಣೆ ಮಾಡಿದರು.
ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ.ವಾಮದೇವಪ್ಪ ತೊಗಲೇರಿ, ಕಿರುವಾಡಿ ಗಿರಿಜಮ್ಮ, ನೀಲಗುಂದ ಜಯಮ್ಮ, ವೀಣಾ ಕೃಷ್ಣಮೂರ್ತಿ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರ್, ಸುನೀಲ್ ವೈ.ಎಂ., ನಿರೀಕ್ಷಾ ವೈ.ಎಸ್. ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

