ಪಾಂಡುರಂಗರಮಣ ನಾಯಕ್ ಅಮೃತ ಭಾರತಿ ಪಿಯು ಕಾಲೇಜಿನಲ್ಲಿ ಭಾರತೀಯ ಪರಂಪರೆಯಲ್ಲಿ ಸಾಧಕರು ಎಂಬ ವಿಷಯದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ ಬೌಧ್ಧಿಕ್ ಪ್ರಮುಖರರಾಗಿರುವ ಕೃಷ್ಣಪ್ರಸಾದ್ ಬದಿ ಮಾತಾಡಿದರು.

ಮುಖ್ಯ ಅತಿಥಿಗಳಾಗಿರುವ ಕರ್ನಾಟಕ ದಕ್ಷಿಣ ಪ್ರಾಂತದ ಬೌಧ್ಧಿಕ್ ಪ್ರಮುಖರರಾಗಿರುವ ಕೃಷ್ಣಪ್ರಸಾದ್ ಬದಿ ಮಾತನಾಡುತ್ತಾ, ದೇಶದ ಒಂದೊಂದು ಪರ್ವತದಲ್ಲಿರುವ ಪವಿತ್ರತೆ ಮತ್ತು ಪ್ರತೀ ನದಿ ಪಾತ್ರದಲ್ಲಿರುವ ಸಂಸ್ಕçತಿಯನ್ನು ತಿಳಿಯುತ್ತಾ ಹೋದಾಗ ನಮ್ಮದೇಶಾಭಿಮಾನ ನೂರ್ಮಡಿಯಾಗುತ್ತದೆ ಎಂದರು. ಪರಂಪರೆಯಲ್ಲಿ ದೇಶದ ಕೀರ್ತಿಯನ್ನು ಬೆಳಗಿದ ಶ್ರೇಷ್ಠ ಗಣಿತಶಾಸ್ತ್ರಜ್ಞರನ್ನು, ವೈದ್ಯರನ್ನು ಮತ್ತು ವಿಜ್ಞಾನಿಗಳನ್ನು ವಿದ್ಯಾರ್ಥಿಗಳೀಗೆ ಪರಿಚಯಿಸಿದರು.

ಉಡುಪಿ ಜಿಲ್ಲಾ ಸ್ವಯಂಸೇವಾ ಸಂಘುದ ಪ್ರಚಾರಕರಾದಅವೀನಾಶ್ ಮತ್ತು ದೀಪಕ್ ಭಾಗಿಯಾದರು.ಟ್ರಸ್ಟ್ನ ಹಿರಿಯ ಸದಸ್ಯರಾದ ಶ್ರೀ ಬಾಲಕೃಷ್ಣ ಮಲ್ಯ ಮತ್ತುಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ಜೋಗಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಹಂಸಿನಿ ಪ್ರಾರ್ಥಿಸಿದರು, ಸಂಖ್ಯಾಶಾಸ್ತçದಉಪನ್ಯಾಸಕರಾದ ಚಂದ್ರಹಾಸ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.


