ಡಾ. ಶಿರೂರು ಅವರು ರಾಷ್ಟ್ರಪ್ರೇಮ ಸೃಜನಶೀಲ ರತ್ನ ಪ್ರಶಸ್ತಿಗೆ ಆಯ್ಕೆ : ಬಿ. ಎಸ್. ಬಾಗೇವಾಡಿ ಮಠ

0
13

ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಹೋಲಿ ರೋಸರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ಡಾ. ರಾಮಕೃಷ್ಣ ಶಿರೂರು ಅವರು ರಾಷ್ಟ್ರಪ್ರೇಮ ಸೃಜನಶೀಲ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ ಎಂದು ಜನ ಪರವಾಣಿ ಪ್ರಕಾಶನ ರಾಣೆಬೆನ್ನೂರು ಮತ್ತು ಜನಪರವಾಣಿ ಸಾಹಿತ್ಯ ಸೌರಭ ರಾಣೆಬೆನ್ನೂರು ಕರ್ನಾಟಕ ಇದರ ಸಂಸ್ಥಾಪಕ ಬಿ.ಎಸ್. ಬಾಗೇವಾಡಿ ಮಠ ಅವರು ತಿಳಿಸಿರುತ್ತಾರೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಭವಾನಿ ಶಂಕರ ಶಾನುಭೋಗ ಮತ್ತು ಸರೋಜಿನಿ ಶಾನುಭೋಗ ಅವರ ಪುತ್ರರಾದ ಇವರು ಕಳೆದ ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.


ಡಾ. ಶಿರೂರು ಅವರು ಭಾಷಾ ಶಿಕ್ಷಕರಾಗಿ, ಸಾಹಿತ್ಯ ಸಂಘಟಕರಾಗಿ, ಪ್ರೌಢಶಾಲಾ ಸಹ ಶಿಕ್ಷಕ ಸಂಘದ ತಾಲೂಕು, ಜಿಲ್ಲೆ ಮತ್ತು ರಾಜ್ಯದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸ್ಮರಣೀಯಣೀಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಈ ಎಲ್ಲ ಸಾಧನೆಗಳನ್ನು ಪರಿಗಣಿಸಿ ಅವರಿಗೆ ರಾಷ್ಟ್ರಪ್ರೇಮ ಸೃಜನಶೀಲ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಅವರ ಸೇವೆ ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು ಹಾರೈಸಿ ಜನಪರವಾಣಿ ಪ್ರಕಾಶನದ ಸಂಸ್ಥಾಪಕರಾದ ಬಿ.ಎಸ್. ಬಾಗೇವಾಡಿ ಮಠ ಮತ್ತು ಪ್ರಧಾನ ಕಾರ್ಯದರ್ಶಿ ಸುನಿತಾ ಸಂಗಮ ಬೀದರ್ ಅವರು ಡಾ.ಶಿರೂರು ಮಾತನಾಡಿದರು ಅವರಿಗೆ ಅಭಿನಂದನೆಸಲ್ಲಿಸಿದ್ದಾರೆ.