ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ ನೂತನ ಪದಾಧಿಕಾರಿಗಳ ನೇಮಕ

0
6

ನಮ್ಮ ಸಮುದಾಯದಿಂದ ಆಯ್ಕೆಯಾದ ಶಾಸಕರು, ಸಚಿವರು ಸಮಾಜದ ಕೆಲಸ ಮಾಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಹೆಚ್.ಎಂ.ರೇವಣ್ಣ

ಬೆಂಗಳೂರು : ಚಂದ್ರಲೇಔಟ್, ಕನಕ ಭವನದಲ್ಲಿ ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ ವತಿಯಿಂದ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮ.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣರವರು, ಕನಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಟಿ.ಬಿ.ಬಳಗಾವಿ, ಭಾರತ್ ಎಲೆಕ್ಟ್ರಾನಿಕ್ಸ್ ಉಪ ಪ್ರಧಾನ ವ್ಯವಸ್ಥಾಪಕ ಗಿರೀಶ್ ಬಿ.ಇ., ರಾಜ್ಯ ಲೆಕ್ಕ ಇಲಾಖೆ ನಿವೃತ್ತ ಅಧಿಕಾರಿ ಆರ್.ಎಸ್.ಪೊಂಡೇ, ಸಮುದಾಯದ ಶಾಮಣ್ಣ, ಸೋಮಶೇಖರ್, ಡಾ ಗಿರೀಶ್ ಎಂ .ಎಸ್ ಹಿರಿಯ ಚರ್ಮ ರೋಗ ತಜ್ಞರು ಇಎಸ್ಐಸಿ ಆಸ್ಪತ್ರೆ ರಾಜಾಜಿನಗರ,ಬೀರಪ್ಪ ಹಂಡಿಗೆ ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ ಅಧ್ಯಕ್ಷರಾದ ಜಿ.ನಾಗರಾಜ್ ರವರು, ಸಂಸ್ಥಾಪಕ ಸಿ.ಬಸವರಾಜು, ಮಾಜಿ ಕಾರ್ಯದರ್ಶಿ ಎಸ್.ರಂಗರಾಜುರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹೆಚ್.ಎಂ.ರೇವಣ್ಣರವರುಮಾತನಾಡಿ ಮುಂದಿನ ದಿನಗಳಲ್ಲಿ ಸಂಘಟನೆಯನ್ನ ಬಲಿಷ್ಠವಾಗಿ ಬೆಳಸಲು ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಂಘಟನೆಯಿಂದ ಸಾಧನೆ ಮಾಡಲು ಸಾಧ್ಯ. ನಾನು ಸಹ ವಿದ್ಯಾರ್ಥಿ ಸಂಘಟನೆ ಬಂದವನು. ಕಾರ್ಮಿಕ ಸಂಘಟನೆ ಜೊತೆಯಲ್ಲಿ ಸರ್ಕಾರಿ ನೌಕರರನ್ನು ಸೇರಿಸಿ ಸಂಘ ಸ್ಪಾಪಿಸಲಾಗಿದೆ.

500ನೇ ಕನಕದಾಸ ಜಯಂತಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ನೇತೃತ್ವದಲ್ಲಿ ಜರುಗಿದ ನಂತರ ಕುರುಬರ ಸಂಘಟನೆ ಗ್ರಾಮ, ಗ್ರಾಮದಲ್ಲಿಯೊ ಸಂಘಟಿತರಾದರು.

ನಮ್ಮ ಸಮಾಜ ಆನೇಕ ಹಿರಿಯರು ಶ್ರಮಿಸಿ ಕುರುಬ ಸಮಾಜದ ಸಂಘಟನೆ ಮಾಡಿದರು ಇಂದು ರಾಜ್ಯದ 3ನೇ ಸ್ಥಾನದಲ್ಲಿ ನಮ್ಮ ಸಮಾಜವಿದೆ.

ಕೆಂಪೇಗೌಡ ಅಭಿವೃದ್ದಿ ನಿಗಮ ಮತ್ತು ಕೆಂಪೇಗೌಡರ ವಿವಿಧ ಕಾರ್ಯಕ್ರಮ ಮಾಡಲು ನಾನು ಮತ್ತು ಸಿದ್ದರಾಮಯ್ಯರವರ ಕಾರಣ.

ಸಮ ಸಮಾಜ ಚಿಂತನೆ ಕೊಲ್ಲೂರು ಮಲ್ಲಪ್ಪ, ಟಿ.ಮರಿಯಪ್ಪ ಸಂಘಟನೆಯಲ್ಲಿ ಹಾಕಿಕೊಟ್ಟ ಬುನಾದಿಯಿಂದ ಕುರುಬರು ಸಂಘಟಿತರಾದರು. ಕುರುಬ ಎಂದು ಹೆಮ್ಮೆಯಿಂದ ಹೇಳಿ. ಬಗರಿರವರು ಗ್ರಂಥಾಲಯ ಇಲಾಖೆಯನ್ನು ಕಾಯಕಲ್ಪ ಕೊಟ್ಟರು.

ಸಮಾಜದಿಂದ ಆಯ್ಕೆಯಾದ ನಮ್ಮ ಸಮಾಜದ ಶಾಸಕರು, ಸಚಿವರು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ ಎಂಬ ವಿಷಾದದ ಸಂಗತಿ. ಹಾವನೂರು ವರದಿಯಿಂದ ನಮ್ಮ ಸಮಾಜಕ್ಕೆ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಸ್ಥಾನಮಾನ ಸಿಗಲು ಸಾಧ್ಯವಾಯಿತು.

ಸಿದ್ದರಾಮಯ್ಯ, ಈಶ್ವರಪ್ಪ, ಬಂಡೆಪ್ಪ ಕಾಂಶಪ್ಪನವರ್ ಒಂದುಗೂಡಿಸಿ ಸಮಾಜ ಸಂಘಟನೆ ಒತ್ತು ನೀಡಲಾಯಿತು.
ಸಮಾಜದವರು ಯಾವ ಪಕ್ಷದಲ್ಲಿ ಇರಲಿ ಅವರು ನಾಯಕರಾಗಿ ಬೆಳಯಬೇಕು. ಎಂಬ ಆಶಯ ನಮ್ಮದು.ಕುರುಬರ ಸಮಾಜ ಉತ್ತಮ ಸಂಘಟನೆ ಇದೆ.

ಮಹಿಳೆಯರು ಮುಂದೆ ವಿಧಾನಸಭೆ, ಲೋಕಸಭೆ ಶೇಕಡ 33ರಷ್ಟು ಮಹಿಳೆಯರಿಗೆ ಸ್ಥಾನ ಸಿಗಲಿದೆ ಎಂದು ಹೇಳಿದರು.

ಟಿ.ಬಿ.ಬಳಗಾವಿರವರು ಮಾತನಾಡಿ 1993ರಲ್ಲಿ ಕನಕ ಜಯಂತಿಯನ್ನು ಹೆಚ್.ಎಂ.ರೇವಣ್ಣರವರ ಅಧ್ಯಕ್ಷತೆಯಲ್ಲಿ ಮಾಡಲಾಯಿತು.
ಸಂಘದಲ್ಲಿ ನಮ್ಮ ಸಮಾಜದ ಸಾಧಕರನ್ನ ಗೌರವಿಸಿ ಸನ್ಮಾನಿಸಲಾಯಿತು. ಅತಿಹೆಚ್ಚು ಅಂಕಗಳಿಸಿದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ನಮ್ಮ ಸಮಾಜದವರು ಎಲ್ಲ ಸರ್ಕಾರದ ಇಲಾಖೆಯಲ್ಲಿ ಅಧಿಕಾರಿ, ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಅವರ ಸಂಕಷ್ಟ, ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ.
ನಮ್ಮ ಸಮಾಜದ ಮಂತ್ರಿಗಳು , ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಹೇಳಿದರು.

ಜಿ.ನಾಗರಾಜ್ ರವರು ಮಾತನಾಡಿ ಸಂಘಟನೆ ಒತ್ತು ನೀಡಬೇಕು, ನೌಕರರ, ಕಾರ್ಮಿಕರ ಹಿತ ಕಾಯಲು ನಮ್ಮ ಸಂಘ ಶ್ರಮಿಸುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಸಂಘಟನೆ, ಪ್ರವಾಸ ಮಾಡಲಾಗುವುದು.

ಕನಕ ಕೇಂದ್ರ ಸಮಿತಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೆ ನಮ್ಮ ಬೇಡಿಕೆಗಳಿಗೆ ಮನವಿ ಸಲ್ಲಿಸಲಾಗುವುದು.