ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಡಿ., ಪುಷ್ಪಗಿರಿ ಅವರು ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಮೋದ್ ಕುಲಾಲ್, ಸುಜಾತ ಪಿ. ಸಾಲಿಯಾನ್, ಜಯಶ್ರೀ ನಾರಾಯಣ, ದಿನೇಶ್ ಮೂಲ್ಯ ಕೊಂಡೆಮಾರ್ , ಗೌರವಾಧ್ಯಕ್ಷರಾದ ಹರೀಶ್ ಕಾರಿಂಜ, ಯುವ ವೇದಿಕೆ ಅಧ್ಯಕ್ಷರಾದ ಅವಿನಾಶ್ ಕುಲಾಲ್, ಮಹಿಳಾ ವೇದಿಕೆ ಅಧ್ಯಕ್ಷರಾದ ಆಶಾಲತಾ ತಿಲಕ್ ರಾಜ್, ನಿಕಟಪೂರ್ವ ಅಧ್ಯಕ್ಷರಾದ ಸೋಮಯ ಮೂಲ್ಯ ಹನೈನಡೆ, ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ ಎನ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

