ರೈತರ ಬೆಳೆ ವಿಮೆ ಹಕ್ಕಿಗಾಗಿ ಮಂಗಳೂರಿನಲ್ಲಿ ಬೃಹತ್ ಹೋರಾಟ

0
4

ಪದ್ಮುಂಜ: ಬೃಹತ್ ಹಕ್ಕೊತ್ತಾಯ ಸಭೆ ಹಾಗೂ ಪ್ರತಿಭಟನೆ ಕೃಷಿಕ ರೈತರಿಗೆ ಬೆಳೆವಿಮೆಯಲ್ಲಿ ಆದ ಅನ್ಯಾಯದ ವಿರುದ್ಧ ಬೃಹತ್ ಹೋರಾಟ!, ನಮ್ಮ ಹಕ್ಕು ನಮ್ಮ ಹೋರಾಟ ಎಂಬ ಧ್ಯೇಯದಲ್ಲಿ, ಬೆಳೆವಿಮೆ ನಷ್ಟ ಪರಿಹಾರದಲ್ಲಿ ರೈತರಿಗೆ ಉಂಟಾಗಿರುವ ತೀವ್ರ ಅನ್ಯಾಯವನ್ನು ಖಂಡಿಸಿ ಹಾಗೂ ನಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು .

ಪ್ರತಿಯೊಬ್ಬ ರೈತರೆಲ್ಲರೂ ಭಾಗವಹಿಸಲು ವಿನಂತಿಲಾಗಿದೆ.ಅಕ್ಟೋಬರ್ 09 ಶುಕ್ರವಾರ,ಬೆಳಿಗ್ಗೆ 10:30 ಕ್ಕೆ ಟೌನ್ ಹಾಲ್, ಮಂಗಳೂರು ನಲ್ಲಿ ಹಕ್ಕೋತ್ತಾಯ ಸಭೆ ನಡೆಯಲಿದ್ದು. ಕಣಿಯೂರು ಗ್ರಾಮದ ಪದ್ಮುಂಜ ಸಿ.ಎ. ಬ್ಯಾಂಕ್ ಬಳಿಯಿಂದ ಬೆಳಿಗ್ಗೆ 8:30 ಕ್ಕೆ ಸರಿಯಾಗಿ ಬಸ್ ಹೊರಡಲಿದೆ. ಕಣಿಯೂರು, ಬಂದಾರು ಹಾಗೂ ಮೊಗ್ರು ಗ್ರಾಮ ವ್ಯಾಪ್ತಿಯಿಂದ ಮಾತ್ರ ಪ್ರತಿಭಟನೆಗೆ ಆಗಮಿಸುವ ರೈತರೆಲ್ಲರಿಗೂ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ಪದ್ಮುಂಜ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.