ಪರ್ತಗಾಳಿ: 80 ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ; ‘ಅಸ್ಮಾಕಂ ಭಾರತಮ್’

0
5

 ಕಾರವಾರ ಪರ್ತಗಾಳಿ: 80 ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಪರ್ತಗಾಳಿ ಶ್ರೀ ಸಂಸ್ಥಾನದ ಶ್ರೀ ರಾಮದೇವ ವೀರವಿಠ್ಠಲ ದೇವರಿಗೆ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿಯವರ ದಿವ್ಯ ಹಸ್ತಗಳಿಂದ ವಿಶೇಷ ಅಲಂಕಾರ ಹಾಗೂ ಪೂಜಾ ವಿಧಿವಿಧಾನಗಳು ನೆರವೇರಿದವು.

‘ಅಸ್ಮಾಕಂ ಭಾರತಮ್’ ಎಂಬ ರಾಷ್ಟ್ರಭಕ್ತಿಯ ಸಂದೇಶದೊAದಿಗೆ ನಡೆದ ಈ ವಿಶೇಷ ಕಾರ್ಯಕ್ರಮವು ಪರ್ತಗಾಳಿ ಚಾತುರ್ಮಾಸ್ಯ ವ್ರತ-26 ರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮತ್ತಷ್ಟು ಮೆರುಗು ನೀಡಿತು.

ಸ್ವಾತಂತ್ರ‍್ಯೋತ್ಸವದ ಸಂದರ್ಭದಲ್ಲಿ ಶ್ರೀ ರಾಮದೇವ ವೀರವಿಠ್ಠಲನಿಗೆ ದೇಶಭಕ್ತಿ ಮತ್ತು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ವಿಶೇಷವಾಗಿ ಅಲಂಕರಿಸಲಾಗಿದ್ದು, ಭಕ್ತರಲ್ಲಿ ಆಧ್ಯಾತ್ಮಿಕ ಭಾವದೊಂದಿಗೆ ರಾಷ್ಟ್ರಭಕ್ತಿಯ ಭಾವನೆಯನ್ನೂ ಮೂಡಿಸಿತು.

ಪರಮಪೂಜ್ಯ ಶ್ರೀಗಳ ಸಾನ್ನಿಧ್ಯ ಹಾಗೂ ದಿವ್ಯ ಹಸ್ತಗಳಿಂದ ನೆರವೇರಿದ ಈ ವಿಶೇಷ ಅಲಂಕಾರವನ್ನು ಅಪಾರ ಸಂಖ್ಯೆಯ ಭಕ್ತರು ಭಕ್ತಿಭಾವದಿಂದ ಕಣ್ತುಂಬಿಕೊAಡರು. ಪರ್ತಗಾಳಿ ಚಾತುರ್ಮಾಸ್ಯ ವ್ರತ-26  ಅಂಗವಾಗಿ ನಡೆಯುತ್ತಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡುವೆ ಸ್ವಾತಂತ್ರ‍್ಯೋತ್ಸವದ ಈ ಆಚರಣೆ ವಿಶೇಷ ಗಮನ ಸೆಳೆಯಿತು.