ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಹರಿಹರ ಶಾಖೆಯಿಂದ ಶ್ರಾವಣ ಸಂಭ್ರಮಕ್ಕೆ ಉಚಿತ ಸಮೂಹ ಗಾಯನಕ್ಕೆ ಆಹ್ವಾನ

0
1


ದಾವಣಗೆರೆ-ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ಹರಿಹರ ಶಾಖೆಯ ಆಶ್ರಯದಲ್ಲಿ ಆಗಸ್ಟ್ 23 ರಂದು ಭಾನುವಾರ ಬೆಳಿಗ್ಗೆ 10.30 ರಿಂದ ಹರಿಹರದ ನಡುವಲ ಪೇಟೆಯ ನಾಮದೇವ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಹಿರಿಯ, ಕಿರಿಯ ಪ್ರತಿಭಾವಂತ ಗಾಯಕ-ಗಾಯಕಿರಿಗೆ ಮುಕ್ತವಾದ ಅವಕಾಶ ಕಲ್ಪಿಸುವ ಸದುದ್ದೇಶದಿಂದ ಉಚಿತ ಸಾಮೂಹಿಕ ಗಾಯನಕ್ಕೆ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಹರಿಹರ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಮಾಧುರಿ ಶೇಷಗಿರಿ ತಿಳಿಸಿದ್ದಾರೆ.
ಹಿರಿಯ, ಕಿರಿಯ ಗಾಯಕರ ತಂಡಗಳು ದೇಶ ಭಕ್ತಿಗೀತೆ, ಭಾವಗೀತೆ, ಜಾನಪದಗೀತೆಗಳನ್ನು ಹಾಡಬಹುದು. ಪ್ರತೀ ತಂಡದಲ್ಲಿ ಕನಿಷ್ಟ 5 ಜನ ಗರಿಷ್ಠ 8 ಜನ ಗಾಯಕರು ಭಾಗವಹಿಸಬಹುದು ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಹರಿಹರ ಶಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಸ್.ಬಿ. ಅಶ್ವಿನಿ ಅರುಣ್‌ಕುಮಾರ್ ಪ್ರಕಟಿಸಿದ್ದಾರೆ.
ಎಲೆಮರೆಯ ಕಾಯಿ ಪ್ರತಿಭಾವಂತ ಹಿರಿಯ, ಕಿರಿಯ ಗಾಯಕ-ಗಾಯಕಿರಿಗೆ ಅವರಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಮುಕ್ತವಾದ ವೇದಿಕೆಯನ್ನು ಕಲ್ಪಿಸಲಾಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸಾಲಿಗ್ರಾಮ ಗಣೇಶ್‌ಶೆಣೈ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ತಂಡದ ಹೆಸರು ನೊಂದಾಯಿಸಲು 8073903588, 8660714274 ಈ ಸನೀಹವಾಣಿಗಳಿಗೆ ಸಂಪರ್ಕಿಸಬಹುದು.