ವರದಿ ರಾಯಿ ರಾಜ ಕುಮಾರ್
ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದೆ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕಿ ಸಂಗೀತ ಬಾಲಚಂದ್ರ ಉಡುಪಿಯ ಕೃಷ್ಣ ಮಠದ ಗೀತಾ ಮಂದಿರದಲ್ಲಿ ಆಗಸ್ಟ್ 23ರಂದು ಬೆಳಿಗ್ಗೆ 6:30 ರಿಂದ ಆಗಸ್ಟ್ 24 ಬೆಳಿಗ್ಗೆ 7.30 ರ ತನಕ ನಿರಂತರ 25 ಗಂಟೆಗಳ ಕಾಲ ದಾಸರ ಪದ ಗಾಯನವನ್ನು ಹಾಡಿ ವಿಶ್ವ ದಾಖಲೆಯನ್ನು ನಿರ್ಮಿಸುವ ಪ್ರಯತ್ನಕ್ಕೆ ಮನಸ್ಸು ಮಾಡಿರುತ್ತಾರೆ. ಭೀಮಾ ಜ್ಯುವೆಲ್ಲರ್ಸ್ ಪ್ರಾಯೋದ್ಯಕತ್ವದಲ್ಲಿ ನಡೆಯುತ್ತಿರುವ ಈ ಪಂಚವಂಶತಿ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಭಾರತದಲ್ಲಿ ಒಬ್ಬಾಕೆ ವಿಶ್ವ ದಾಖಲೆಯ ಪ್ರಯತ್ನಕ್ಕೆ ಎಳಸಿದ್ದಾರೆ. ಸಂಪೂರ್ಣವಾಗಿ ಹೊಸದಾಗಿ ಸ್ವರ ಸಂಯೋಜನೆ ಮಾಡಲಾದ 250 ದಾಸರ ಪದಗಳು ಇಲ್ಲಿ ಪ್ರಸ್ತುತಿಗೊಳ್ಳಲಿವೆ. 25 ವರ್ಷಗಳ ಸಂಗೀತ ಪಯಣದ ಮೈಲಿಗಲ್ಲಾಗಿ ಇದು ದಾಖಲೆ ಗೊಳ್ಳಲಿದೆ. ಎಂಟು ಮಂದಿ ಸಹಕಲಾ ವಿಧಾನ ಸಹಯೋಗದೊಂದಿಗೆ ಈ ಕಾರ್ಯಕ್ರಮ ಮೂಡಿಬರಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಬಾಲಚಂದ್ರ, ಗುರುರಾಜ ಎಂ ಪಿ, ವಿಜಯಕುಮಾರ್ ಕೋಡಿಯಾಲಬೈಲ್, ವಿಜಯ ಕೋಕಿಲ, ದೀಕ್ಷಿತ್ ಕೊಡಂಚ ಹಾಜರಿದ್ದರು.

