ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಾಣೂರಿನಲ್ಲಿ ಭರ್ಜರಿ ಚಾಲನೆ

0
23

ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್ ಮೈ ಭಾರತ್ ಉಡುಪಿ ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ದೇಶದ 80 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಹರ್ ಘರ್ ತಿರಂಗ ಅಭಿಯಾನ ಮತ್ತು ಸಾಣೂರಿನಿಂದ ಮುರತ್ತಂಗಡಿವರೆಗೆ ಬೈಕ್ ಜಾಥಾ ನಡೆಯಿತು ̤

ಜಾಥಾಕ್ಕೆ ಚಾಲನೆ ನೀಡಿದ ಶ್ರೀ ದಯಾನಂದ್ ಶೆಟ್ಟಿ ಮಾತನಾಡಿ ರಾಷ್ಟ್ರ ಮೊದಲು ಎಂಬ ಕಲ್ಪನೆಯೊಂದಿಗೆ ಸಂಘ ಸಂಸ್ಥೆಗಳು ಸಾಮಾಜಿಕ ಚಟುವಟಿಕೆಗಳನ್ನು ನಡೆಸಿದಾಗ ಗ್ರಾಮದ ಅಭಿವೃದ್ಧಿಯೊಂದಿಗೆ ರಾಜ್ಯ ರಾಷ್ಟ್ರಕ್ಕೆ ಅಭಿವೃದ್ಧಿ ಚಿಂತನೆಯ ವೇಗ ದೊರೆಯುತ್ತದೆ ಈ ನಿಟ್ಟಿನಲ್ಲಿ ಮೈ ಭಾರತ್ ಕೇಂದ್ರ ಉಡುಪಿ ಇವರೊಂದಿಗೆ ಸದಾ ಕೈ ಜೋಡಿಸುವ ಸಾಣೂರು ಯುವಕ ಮಂಡಲದ ಕೆಲಸ ಕಾರ್ಯಕ್ರಮಗಳು ಗ್ರಾಮದ ಅಭಿವೃದ್ಧಿ ಚಿಂತನೆಗೆ ಪ್ರೇರಣದಾಯಕವಾಗಿ ಪರಿಣಾಮ ಬಿರಲಿದೆ ಎಂದರು.

ಈ ಸಂದರ್ಭದಲ್ಲಿ ಮಂಡಲದ ಹಿರಿಯ ಸದಸ್ಯರಾದ ರಾಘು ಸುವರ್ಣ ಮಾಜಿ ಅಧ್ಯಕ್ಷರುಗಳಾದ ರಾಘು ಪೂಜಾರಿ, ಪ್ರವೀಣ್ ಶೆಟ್ಟಿ, ದೇವಾನಂದ್ ಶೆಟ್ಟಿ, ಜಗದೀಶ್ ಕುಮಾರ್, ಶಂಕರ್ ಶೆಟ್ಟಿ ಪ್ರಕಾಶ್ ಮಡಿವಾಳ ಮಂಡಲದ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ಮೋಹನ್ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಪೂಜಾರಿ, ಕೋಶಾಧಿಕಾರಿ ಶುಭಕರ್ ಶೆಟ್ಟಿ ಜೊತೆ ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ ಸಮಿತಿ ಸದಸ್ಯರುಗಳಾದ ಜಯನ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಹರಿಂದ್ರ ಶೆಟ್ಟಿ ವಿಘ್ನೇಶ್ ರಾವ್ ಸುದರ್ಶನ್ ನಾಯ್ಕ್ ಪ್ರಸನ್ನ ಆಚಾರ್ಯ ಅನಿಲ್ ಕೋಟ್ಯಾನ್ ಪ್ರಭಾಕರ್ ಶೆಟ್ಟಿ ಸುನೀಲ್ ಕುಲಾಲ್ ವಿನಯ್ ಶೆಟ್ಟಿ ಅಬ್ದುಲ್ ಗಫೂರ್ ರಾಜು ಭಂಡಾರಿ ಸದಾಶಿವ ದೇವಾಡಿಗ ಸುಧಾಕರ್ ಶೆಟ್ಟಿ ಪ್ರಶಾಂತ್ ಶೆಟ್ಟಿ ಮುರಳೀಧರ ಸುವರ್ಣ ಪ್ರಕಾಶ್ ರಾವ್ ವಿದ್ಯಾನಂದ್ ಕೋಟ್ಯಾನ್ ಹರೀಶ್ ರಾವ್ ಜಯ ಶೆಟ್ಟಿಗಾರ್ ಜೀವನ್ ರಾವ್ ಅಮೋಗ್ ಶೆಟ್ಟಿ ಜಿತೇಶ್ ರಾವ್ ವಿಕಾಸ್ ಶೆಟ್ಟಿ ಶಿವಪ್ರಸಾದ್ ಮಂಜುನಾಥ್ ರಾವ್ ವಿಕಾಸ್ ಪೂಜಾರಿ ಪುಟಾಣಿಗಳಾದ ಭಾನ್ವಿ ಶೆಟ್ಟಿ ಅಲೋಫ್ ಆರ್ಯನ್ ಪ್ರದ್ಯೋತ್ ಮೊದಲಾದವರು ಉಪಸ್ಥಿತರಿದ್ದರು.