ಕಾರ್ಕಳ : ಪುರಸಭೆ ವ್ಯಾಪ್ತಿಯಲ್ಲಿ ಬರುವ ಮಾರುಕಟ್ಟೆ ಪಾರ್ಕಿಂಗ್ ಸ್ವಚ್ಛತೆ ಹಾಗೂ ನಿರ್ವಹಣೆ ಇಲ್ಲದೆ ದುರ್ನಾಥ ಬರುತ್ತಿದೆ ಪುರಸಭೆ ಅಧಿಕಾರಿಗಳು ನಿದ್ರೆಯಿಂದ ಎಚ್ಚರ ವಾಗಿ ಒಮ್ಮೆ ಮಾರುಕಟ್ಟೆ ವ್ಯವಸ್ಥೆಗಳನ್ನು ನೋಡಿ.

ಮಾರುಕಟ್ಟೆ ಸುಂಕ ತೆಗೆದುಕೊಳ್ಳುವವರು ಸರಿಯಾಗಿ ಕೆಲಸ ಮಾಡಬೇಕು ಅಲ್ವಾ, ಮಾರುಕಟ್ಟೆಯ ತ್ಯಾಜ್ಯ, ಕೊಳೆತ ಮೀನು, ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದೇ ಜನರು ಅಲ್ಲೇ ಮೂತ್ರ ವಿಸರ್ಜನೆ ಮಾಡಿ ನಡೆದಾಡುವ ಸ್ಥಿತಿ ನಿರ್ಮಿತವಾಗಿದೆ.
ಹಾಗಾಗಿ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಮನ ಕೊಡದಿದ್ದಲ್ಲಿ ಸಾರ್ವಜನಿಕರನ್ನು ಸೇರಿಸಿ ಪುರಸಭೆ ಮುತ್ತಿಗೆ ಹಾಕಬೇಕಾದಿತು ನಿಮ್ಮ ಕೆಲಸಗಳನ್ನು ನಾವು ನೆನಪು ಮಾಡಿಸುವಂತೆ ಮಾಡಬೇಡಿ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಅವರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ.

