ಪೋಷಕ-ರಕ್ಷಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ

0
5

ಮಾಲಾಡಿ : ಸ. ಉ. ಪ್ರಾ. ಶಾಲೆ, ಮಾಲಾಡಿಯಲ್ಲಿ ದಿನಾಂಕ 18-08-2026 ರಂದು ಪೋಷಕ-ರಕ್ಷಕ ಸಭೆ ಮತ್ತು ಊರದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಸಭೆಯಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ, ಹಾಜರಾತಿ, ಶಿಸ್ತು, ಸ್ವಚ್ಛತೆ, ಆರೋಗ್ಯ, ವೈಯಕ್ತಿಕ ಬೆಳವಣಿಗೆ ಹಾಗೂ ಎಫ್.ಎ. 1 ಪರೀಕ್ಷೆಯ ಫಲಿತಾಂಶದ ಕುರಿತು ಪೋಷಕರೊಂದಿಗೆ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಚರ್ಚಿಸಿದರು.

ಶಾಲೆಯ ಶೈಕ್ಷಣಿಕ ಹಾಗೂ ಭೌತಿಕ ಅಭಿವೃದ್ಧಿಗೆ ಸದಾ ಬೆಂಬಲವಾಗಿ ನಿಂತು, ಅಗತ್ಯ ಸಂದರ್ಭದಲ್ಲಿ ವಿವಿಧ ರೀತಿಯ ಸಹಕಾರ, ದೇಣಿಗೆ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುತ್ತಿರುವ ಊರದಾನಿಗಳಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಮತ್ತು ನಿತ್ಯಾನಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾರಂಕಿ ವಲಯದ ಮೇಲ್ವಿಚಾರಕರಾದ ಕೇಶವ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಹಕೀಂ, ಉಪಾಧ್ಯಕ್ಷೆ ಶೋಭ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಜುಲಿಯಾನ ಶಾಲಿನಿ ಬರೆಟ್ಟೊ ಉಪಸ್ಥಿತರಿದ್ದರು.

ಗೌರವ ಶಿಕ್ಷಕಿ ಚೈತ್ರಾ ಅವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ದಿವ್ಯ ಅವರು ವಂದಿಸಿದರು ಹಾಗೂ ಗೌರವ ಶಿಕ್ಷಕಿ ಮಮತಾ ಕೆ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು.