ಲೋಕಕಲ್ಯಾಣ, ಧರ್ಮ ಸಂವರ್ಧನ, ಶಾಂತಿ, ಸಮೃದ್ಧಿ ಹಾಗೂ ಸರ್ವಜನ ಕ್ಷೇಮದ ಸಂಕಲ್ಪ ದೊಂದಿಗೆ ಸ್ವಾಮಿ ಅಖಿಲೇಶ್ ಜಿ ಮಹಾರಾಜ್ ಸೇವಾ ಸಂಸ್ಥಾನ ಮತ್ತು ಡಿ ಸ್ಯಾಫ್ರನ್ ಫ್ರಂಟ್ ಸಹಯೋಗದಲ್ಲಿ ಲಕ್ಷ್ಮಿ ನಾರಾಯಣ ಮಹಾಯಾಗ ಆಗಸ್ಟ್ 24 ರಿಂದ 28 ರ ತನಕ ಮಂಗಳೂರಿನ ಯೋಗೇಶ್ವರ ಕದ್ರಿಮಠದಲ್ಲಿ ನಡೆಯಲಿದೆ.
ಅಗಸ್ಟ್ 24ರಂದು ಬೆಳಗ್ಗೆ 8:00 ಗಂಟೆಗೆ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಿಂದ ಕಳಶ ಯಾತ್ರೆ ಇಂದ ಪ್ರಾರಂಭವಾಗುವ ಯಾಗ ಆಗಸ್ಟ್ 28ರಂದು ಪೂರ್ಣಾಹುತಿ ಗೊಳ್ಳಲಿದೆ. ಉತ್ತರ ಪ್ರದೇಶ ವಾರಣಾಸಿಯ ವಿಂಧ್ಯಾಚಲದ ಲವಕುಶ ಮಿಶ್ರಾಜಿ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಕಿರಣ್ ಕುಮಾರ್ ಜೋಗಿ, ಕಾರ್ಯಧ್ಯಕ್ಷ ದಿನಕರ ಶೆಟ್ಟಿ, ರಾಘವೇಂದ್ರ ರಾವ್, ಸಂಚಾಲಕ ರಾಜೇಶ್ ಪವಿತ್ರನ್, ಕಾರ್ಯದರ್ಶಿ ಎಲ್‌ಕೆ ಸುವರ್ಣ ಹಾಜರಿದ್ದರು.
ವರದಿ ರಾಯಿ ರಾಜ ಕುಮಾರ್

