ಯುವವಾಹಿನಿ ಪಡುಬಿದ್ರಿ ಘಟಕದ ನೂತನ ಅಧ್ಯಕ್ಷರಾಗಿ ನಿಖಿಲ್ ಪೂಜಾರಿ ಆಯ್ಕೆ

0
4

ಆಗಸ್ಟ್ 30ರಂದು ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ; ಪ್ರತಿಭಾ ಪುರಸ್ಕಾರ ಹಾಗೂ ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ

ಪಡುಬಿದ್ರಿ: ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ನಿಖಿಲ್ ಪೂಜಾರಿ ಆಯ್ಕೆಯಾಗಿದ್ದನೂತನ ಕಾರ್ಯಕಾರಿ ಸಮಿತಿಗೆ ಕಾರ್ಯದರ್ಶಿಯಾಗಿ ರಾಜೇಶ್ವರಿ ಅವಿನಾಶ್, ಪ್ರಥಮ ಉಪಾಧ್ಯಕ್ಷರಾಗಿ ಸುಜಾತ ಪ್ರಸಾದ್, ದ್ವಿತೀಯ ಉಪಾಧ್ಯಕ್ಷರಾಗಿ ಭಾಸ್ಕರ್ ಎನ್. ಅಂಚನ್, ಜೊತೆ ಕಾರ್ಯದರ್ಶಿಯಾಗಿ ಮನೀಷ್ ಎ. ಪೂಜಾರಿ, ಕೋಶಾಧಿಕಾರಿಯಾಗಿ ಪೂರ್ಣಿಮಾ ವಿಧಿತ್ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ನಿಶ್ಮಿತಾ ಪಿ.ಎಚ್. ಆಯ್ಕೆಯಾಗಿದ್ದಾರೆ.

ವಿವಿಧ ವಿಭಾಗಗಳ ನಿರ್ದೇಶಕರಾಗಿ ಪ್ರತಿಮಾ ಲೋಕೇಶ್ (ವ್ಯಕ್ತಿತ್ವ ವಿಕಸನ), ಕು| ಸ್ಫೂರ್ತಿ (ಕ್ರೀಡೆ), ಕು| ದೀಕ್ಷಾ (ಆರೋಗ್ಯ), ಜಯ ಎನ್. ಪೂಜಾರಿ (ಸಮಾಜ ಸೇವೆ), ಹರೀಶ್ ಕೋಟ್ಯಾನ್ ಉಳ್ಳೂರು (ಕಲೆ ಮತ್ತು ಸಾಹಿತ್ಯ), ಕು| ಶ್ರೇಯಾ ಎಸ್. ಬಂಗೇರ (ಸಾಂಸ್ಕೃತಿಕ), ಸಂತೋಷ್ ಕರ್ನಿರೆ (ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ), ಚೈತ್ರಾ ಮನೋಹರ್ (ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಹಾಗೂ ಅನುಷ್ಠಾನ), ಕು| ಶ್ರಾವ್ಯ ಎಸ್. ಬಂಗೇರ ಹಾಗೂ ಪ್ರಣಮ್ ಪಿ. ಕೋಟ್ಯಾನ್ (ವಿದ್ಯಾರ್ಥಿಗಳ ಸಂಘಟನೆ), ಅಂಕಿತ್ ಕುಮಾರ್ (ಪ್ರಚಾರ), ಲತಾ ವಸಂತ್ ಹಾಗೂ ಶಾಂತ ವಿ. (ಮಹಿಳಾ ಸಂಘಟನೆ), ತುಳಸಿ ಕರುಣಾಕರ್ (ವಿದ್ಯಾನಿಧಿ) ಮತ್ತು ಹೇಮಂತ್ ನಂದಿಕೂರು (ಸಂಘಟನಾ ಕಾರ್ಯದರ್ಶಿ) ಆಗಿ ಆಯ್ಕೆಯಾಗಿದ್ದಾರೆ.

2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ; ಪ್ರತಿಭಾ ಪುರಸ್ಕಾರ ಹಾಗೂ ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ ಕಾರ್ಯಕ್ರಮ ಆಗಸ್ಟ್ 30ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಸಹಕಾರ ಸಂಗಮ ಪಡುಬಿದ್ರಿ ಸಿ.ಎ. ಸೊಸೈಟಿಯಲ್ಲಿ ನಡೆಯಲಿದೆ.