ಹೆಬ್ರಿ : ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬಂಧಿತ ಜಿಲ್ಲಾ ಮಟ್ಟದ ವಿಜ್ಞಾನ,ಗಣಿತ ಮತ್ತು ಸಂಸ್ಕೃತಿ ಜ್ಞಾನ ಮೇಳದ ಕಿಶೋರ ವರ್ಗದಲ್ಲಿ ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 8 ಪ್ರಥಮ ಸ್ಥಾನ ಸಹಿತ ಒಟ್ಟು 16 ಪ್ರಶಸ್ತಿ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ಲೇ ಮೊಡೆಲಿಂಗ್ ನಲ್ಲಿ ಪ್ರಥಮಸ್ಥಾನ ಚಿರಾಗ್ , ಆಶುಭಾಷಣದಲ್ಲಿ ಪ್ರಥಮಸ್ಥಾನ ಗಗನ್, ಗಣಿತ ಪ್ರಯೋಗದಲ್ಲಿ ಪ್ರಥಮಸ್ಥಾನ ವರ್ಷಿತ್, ಕ್ಷೇತ್ರ ಗಣಿತ ಸಂಬಂಧಿಸಿದ ಮಾದರಿ ಪ್ರದರ್ಶನದಲ್ಲಿ ಪ್ರಥಮ ಸ್ಥಾನವನ್ನು ಆತ್ರೇಯ ಹೆಬ್ಬಾರ್, ವಿಜ್ಞಾನ ಪ್ರಯೋಗದಲ್ಲಿ ಪ್ರಥಮಸ್ಥಾನ ಪಲ್ಲವಿ, ವಿಜ್ಞಾನ ಪರಮಾಣು ರಚನೆ ಮಾದರಿ ಪ್ರದರ್ಶನದಲ್ಲಿ ಪ್ರಥಮ ಸ್ಥಾನವನ್ನು ಐಸಿರಿ ಎಂ, ವಿಜ್ಞಾನ ಮಾನವನ ಹೃದಯದ ಕಾರ್ಯ ವಿಧಾನದ ಮಾದರಿ ಪ್ರದರ್ಶನದಲ್ಲಿ ಪ್ರಥಮ ಸ್ಥಾನವನ್ನು ಸ್ಮಿತಿ, ವಿಜ್ಞಾನ ನವಚಾರಿತ ಮಾದರಿಯಲ್ಲಿ ಪ್ರಥಮ ಸ್ಥಾನವನ್ನು ಪ್ರದ್ವಿತ್ ಪಡೆದಿದ್ದಾರೆ.
ಹಾಗೆಯೇ ವಿಜ್ಞಾನ ಪತ್ರವಾಚನದಲ್ಲಿ ದ್ವಿತೀಯ ಸ್ಥಾನವನ್ನು ಆತ್ರೇಯ ನಾಯಕ್, ವಿಜ್ಞಾನ ಸೆನ್ಸಾರ್ ಮಾದರಿ ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಮಂಜುನಾಥ, ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನವನ್ನು ಸಂಕೇತ್ ಪೈ, ಚಿರಂತನ್, ನಿವೇದಿತಾ, ಗಣಿತ ಸಂಶೋಧನಾರ್ಹ ಮಾದರಿ ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಶ್ರೀನಿವಾಸ, ಗಣಿತ ಮಾದರಿ ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ವಿಕಾಸ್, ವಿಜ್ಞಾನ ಚಲನೆ ಮಾದರಿ ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಸಾಯಿರಾಂ ಪಡೆದಿರುತ್ತಾರೆ.
ವೇದ ಗಣಿತ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನವನ್ನು ಅವನಿ, ಸಾನ್ವಿ, ಗಗನ್ಯ, ವಿಜ್ಞಾನ ರಸಪ್ರಶ್ನೆಯಲ್ಲಿ ತೃತೀಯ ಸ್ಥಾನವನ್ನು ಪ್ರಥಮ್ ಎನ್ ರಾವ್, ಆಯುಷ್ ಪೈ, ಅವಿಘ್ನ ಪಡೆದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಮತ್ತು ತರಬೇತಿ ನೀಡಿದ ಸಂಸ್ಥೆಯ ಶಿಕ್ಷಕರನ್ನು ಸಂಸ್ಥೆಯ ಮುಖ್ಯಸ್ಥೆ ಅಪರ್ಣಾ ಆಚಾರ್ ಅಭಿನಂದಿಸಿದ್ದಾರೆ.

