ಅಖಿಲ ಭಾರತ ಸಿಎ ಸಂಸ್ಥೆಯ ಉಡುಪಿ ಶಾಖೆಯ ಸ್ಥಾಪಕ ಸದಸ್ಯರ ಸ್ನೇಹ ಸಮ್ಮಿಲನ

0
7

ಅಖಿಲ ಭಾರತ ಸಿಎ ಸಂಸ್ಥೆಯ ಉಡುಪಿ ಶಾಖೆಯ ಸ್ಥಾಪಕ ಸದಸ್ಯರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಮಣಿಪಾಲದ ಮಧುವನ್ ಸೆರಾಯ್ ನಲ್ಲಿ ಸಾಯಂಕಾಲ ನಡೆಯಿತು. ಕಾರ್ಯಕ್ರಮವನ್ನು ಶಾಖೆಯು ಆರಂಭವಾಗಿ 25 ವರ್ಷ ಪೂರೈಸಿದ ಅಂಗವಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಖೆಯ ಸ್ಥಾಪಕ ಸದಸ್ಯರು ತಮ್ಮ ಕುಟುಂಬದ ಸದಸ್ಯರ ಸಮೇತ ಸುಮಾರು 108 ಜನರು ಭಾಗವಹಿಸಿದ್ದರು.

ಶಾಖೆಯ ಸ್ಥಾಪಕ ಅಧ್ಯಕ್ಷ ಸಿಎ ಗುಜ್ಜಾಡಿ ಪ್ರಭಾಕರ ನರಸಿಂಹ ನಾಯಕ್ ಇವರು ಶಾಖೆಯು ಬೆಳೆದು ಬಂದ ಹಾದಿಯನ್ನು ತಿಳಿಸಿದರು. ಹಿರಿಯ ಸದಸ್ಯರಾದ ಸಿಎ ನರಸಿಂಹ ಕಾಮತ್ ಇವರು ಶಾಖೆಯು ಆರಂಭವಾಗುವ ಮೊದಲು ಮತ್ತು ನಂತರದ ಮಧುರ ಕ್ಷಣಗಳನ್ನು ನೆನಪಿಸಿದರು.

ಸಿಎ ಅನಂತನಾರಾಯಣ ಪೈ ಕೆ. ಇವರು ಶಾಖೆಯನ್ನು ಆರಂಭಿಸಲು ನೆರವಾದ ವ್ಯಕ್ತಿಗಳನ್ನು ಶ್ಲಾಘಿಸಿದರು.

ಸಿಎ ದೇವ್ ಆನಂದರು ಅಗಲಿದ ಸ್ಥಾಪಕ ಸದಸ್ಯರ ಸಂಸ್ಮರಣೆ ಮಾಡಿ ಅವರ ಕುಟುಂಬದ ಸದಸ್ಯರಿಗೆ ಗೌರವ ಅರ್ಪಣೆ ಮಾಡಿದರು. ಆಗಮಿಸಿದ ಎಲ್ಲ ಸ್ಥಾಪಕ ಸದಸ್ಯರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಶಾಖೆಯ ಪ್ರಥಮ ಆರು ವರ್ಷಗಳ ಸಾಧನೆ ಬಗ್ಗೆ ಒಂದು ವೀಡಿಯೋವನ್ನು ಪ್ರಸ್ತುತ ಪಡಿಸಲಾಯಿತು.

ಸಿಎ ಮುರುಳೀಧರ ಕಿಣಿ, ಸಿಎ ಎನ್.ಪಿ. ಪೈ ಇವರು ಕಾರ್ಯಕ್ರಮ ನೆರವೇರಿಸಿ ಕೊಟ್ಟರು.

ಸಿಎ ಶ್ರೀಧರ ಕಾಯುತ್ ಇವರು ರಸಪ್ರಶ್ನೆ ಕಾರ್ಯಕ್ರಮ ನೆರವೇರಿಸಿದರು.

ಮಂಗಳೂರಿನ ಪ್ರಹ್ಲಾದ ಮತ್ತು ಅಖಿಲ ಇವರಿಂದ ಹಳೆಯ ಹಿಂದಿ, ಕನ್ನಡ ಮತ್ತು ತುಳು ಚಲನ ಚಿತ್ರಗೀತೆಗಳ ಕಾರ್ಯಕ್ರಮ ಜರಗಿತು.

ಅಷಾಡ ತಿಂಗಳ ವಿಶಿಷ್ಟ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.